ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಕೆಕ್ಕಾರ, ನವಿಲಗೋಣ, ಕವಲಕ್ಕಿ, ಹಳದೀಪುರಭಾಗದಲ್ಲಿ ಸೋಂಕು
ಇನ್ನು ಹಲವೆಡೆ ಕಾಣಿಸಿಕೊಂಡಿದೆ ಮಹಾಮಾರಿ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು 13 ಕರೊನಾ ಪಾಸಿಟಿವ್ ಕಂಡುಬoದಿದೆ. ಪಟ್ಟದ ಪ್ರಭಾತನಗರ, ಬಾಂದೆಹಳ್ಳ, ಗುಣಗುಣಕೇರಿ ಸೇರಿದಂತೆ ಪಟ್ಟಣವ್ಯಾಪ್ತಿಯಲ್ಲೇ ಏಳು ಪ್ರಕರಣ ಪತ್ತೆಯಾಗಿದೆ. ಗ್ರಾಮೀಣ ಭಾಗವಾದ ಕೆಕ್ಕಾರ, ನವಿಲಗೋಣ, ಕವಲಕ್ಕಿ, ಹಳದೀಪುರ ಭಾಗದಲ್ಲಿ 6 ಪ್ರಕರಣ ದೃಢಪಟ್ಟಿದೆ. ಇಂದು ಒಟ್ಟು ತಾಲೂಕಿನಲ್ಲಿ ಇಂದು 13 ಜನರಿಗೆ ಸೋಂಕು ಪತ್ತೆಯಾಗಿದೆ.


ಪಟ್ಟಣದ ಪ್ರಭಾತನಗರದ ಗಂಡ ಮತ್ತು ಹೆಂಡತಿಯಲ್ಲಿ , 36 ವರ್ಷದ ಪುರುಷ, 30 ವರ್ಷದ ಮಹಿಳೆ, ಬಾಂದೆಹಳ್ಳದ ಒಂದೆ ಕುಟುಂಬದ ನಾಲ್ವರಲ್ಲಿ, 64 ವರ್ಷದ ಪುರುಷ, 58 ವರ್ಷದ ಮಹಿಳೆ, 30 ವರ್ಷದ ಯುವಕ, 26 ವರ್ಷದ ಯುವಕ, ಗುಣಗುಣಕೇರಿಯ 38 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.


ಗ್ರಾಮೀಣ ಭಾಗವಾದ ಕೆಕ್ಕಾರದ 62 ವರ್ಷದ ಮಹಿಳೆ. 26 ವರ್ಷದ ಯುವಕ, ಕವಲಕ್ಕಿಯ 55 ವರ್ಷದ ಮಹಿಳೆ, 25 ವರ್ಷದ ಯುವಕ, ಹಳದೀಪುರದ 45 ವರ್ಷದ ಪುರುಷ, ನವಿಲಗೋಣದ 37 ವರ್ಷದ ಪುರುಷ ಸೇರಿದಂತೆ ಒಟ್ಟು 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ತಾಲೂಕಾ ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಮನೆಯಲ್ಲಿ 112 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪನಿಗೆ ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಆಸಕ್ತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
ಸಂಪರ್ಕಿಸಿ: 7848833568

Exit mobile version