ಅಂಕೋಲಾ: ತಾಲೂಕಿನಲ್ಲಿ ಆಗಾಗ ಸುರಿಯುತ್ತಿರುವ ಭಾರೀ ಮಳೆಯಿಂದ ಕೆಲ ಅವಾಂತರ ಮತ್ತು ಅನಾಹುತಕ್ಕೆ ಕಾರಣವಾಗುತ್ತಲೇ ಇದೆ. ಅಂತೆಯೇ ಕಳೆದೆರೆಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಕೇಶವಳ್ಳಿ ಗ್ರಾಮದ ಗಣಪತಿ ನಾರಾಯಣ ಹೆಗಡೆ ಹಾಗೂ ಉಮಾಮಹೇಶ್ವರ ನಾರಾಯಣ ಹೆಗಡೆ ಸಹೋದರರಿಗೆ ಸಂಬoಧಿಸಿದ ಖಾಸಗಿ ಜಾಗದಲ್ಲಿದ ದನದ ಕೊಟ್ಟಿಗೆಗೂ ಸಂಪೂರ್ಣ ಹಾನಿಯಾಗಿದೆ.
Fact Check: ವೈರಲ್ ಆದ ಸುಳ್ಳು ಸುದ್ದಿ: ಅಸಲಿಯತ್ತೇನು ನೋಡಿ?
ಈ ಆಕಸ್ಮಿಕ ಅವಘಡದಲ್ಲಿ ಕೊಟ್ಟಿಗೆಯಲ್ಲಿದ್ದ 1 ಆಕಳಿಗೆ ತೀವ್ರ ಸ್ವರೂಪದ ಗಾಯ ನೋವುಗಳಾಗಿದ್ದು, ಇತರೆ 2 ಆಕಳುಗಳಿಗೂ ಅಲ್ಪ ಪ್ರಮಾಣದ ಗಾಯ ನೋವುಗಳಾಗಿದೆ. ಅದೃಷ್ಟ ವಶಾತ್ ಆಕಳುಗಳು ಮತ್ತು ಕರುವಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಕoದಾಯ ಇಲಾಖೆ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕೊಟ್ಟಿಗೆಗೆ ಒಂದು ಲಕ್ಷ ರೂಪಾಯಿ ಹಾನಿ ಅಂದಾಜಿಸಿದ್ದಾರೆ.
ಅಂಕೋಲಾದ ಪಶುವೈದ್ಯ ಆಸ್ಪತ್ರೆ ಸಿಬ್ಬಂದಿಗಳು, ಅಂಬುಲೆನ್ಸ್ ಸೇವೆ ಮೂಲಕ ಸ್ಥಳಕ್ಕೆ ಧಾವಿಸಿ ಬಂದು ಗಾಯಗೊಂಡ ಆಕಳುಗಳಿಗೆ ಚಿಕಿತ್ಸೆ ನೀಡಿದ್ದಾರೆ . ರೈತ ಕುಟುಂಬಕ್ಕಾದ ಹಾನಿಗೆ ಸರ್ಕಾರ ಅತಿ ಶೀಘ್ರವಾಗಿ ಯೋಗ್ಯ ಪರಿಹಾರ ನೀಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.