ಗೋರೆಯ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಶ್ರೀದೇವರಿಗೆ ವಿಶೇಷ ಪೂಜೆ

ಕುಮಟಾ: ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ದಿನದಂದು ಭಗವಾನ್ ಶ್ರೀ ಕೃಷ್ಣನ ಜನ್ಮದಿನಾಚರಣೆಯನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಜನರು ಶ್ರೀಕೃಷ್ಣನನ್ನು ಪೂಜಿಸಿ, ಮಂತ್ರ, ಭಜನೆಯನ್ನು ಹಾಡಿ, ಉಪವಾಸ ವ್ರತವನ್ನು ತೆಗೆದುಕೊಳ್ಳುತ್ತಾರೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ.

BEML Recruitment 2024: ಉದ್ಯೋಗಾವಕಾಶ: ಐಟಿಐ, ಡಿಪ್ಲೋಮಾ & ಪದವಿ ಪಾಸಾದವರು ಅರ್ಜಿ ಸಲ್ಲಿಸಬಹು

ಈ ದಿನದಂದು ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಅಂತೆಯೇ ಕುಮಟಾ ತಾಲೂಕಿನ ಗೋರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯಿoದಲೇ ಶ್ರೀ ದೇವರಿಗೆ ಬಿಲ್ವಾರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕವನ್ನು ಹಮ್ಮಿಕೊಂಡಿದ್ದರು.

ಭಕ್ತಾದಿಗಳು ದೇವರಿಗೆ ಹಣ್ಣು ಕಾಯಿ ಸೇರಿದಂತೆ ವಿವಿದ ಭಗೆಯ ನೈವೇದ್ಯಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಈ ವೇಳೆ ಶ್ರೀಧರ ದತ್ತಾತ್ರೇಯ ಭಟ್ಟ ಅವರು ನಮ್ಮ ವಿಸ್ಮಯ ಟಿವಿಯೊಂದಿಗೆ ಮಾತನಾಡಿ, ಈ ದೇವಸ್ಥಾನವು ತುಂಬಾ ಪುರಾತನವಾದ್ದು, ಇಲ್ಲಿ ನಂಬಿದವರಿಗೆ ಎಲ್ಲರಿಗೂ ಒಳ್ಳೆಯದಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಬೆಳಗ್ಗಿಯಿಂದಲೇ ಶ್ರೀ ದೇವರಿಗೆ ಅಭಿಷೇಕ, ಅರ್ಚನೆಗಳು ನಡೆಯುತ್ತಿದೆ. ಸಂಜೆ 8 ಗಂಟೆಯ ವರೆಗೂ ದೇವಸ್ಥಾನವು ತೆರೆದಿರುತ್ತದೆ. ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗಿ ಎಂದು ಹೇಳಿದರು.

ವೇಂಕಟರಮಣ ಹೆಗಡೆಯವರು ಮಾತನಾಡಿ, ಇಂದು ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ, ಮುಂಜಾನೆಯಿoದ ಸಂಜೆಯವರೆಗೂ ದೇವಸ್ಥಾನದಲ್ಲಿ ಬಿಲ್ವಾರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕವು ಬಹಳ ವಿಧಿ ವಿಧಾನದಂತೆ ನಡೆಯುತ್ತಾ ಇರುತ್ತದೆ. ತಾಲೂಕಿನ ಭಕ್ತಾಧಿಗಳು ಬಂದು ಶ್ರೀ ದೇವರ ಸನ್ನಿದಿಯಲ್ಲಿ ಪೂಜೆಯನ್ನು ನೆರವೇರಿಸಿಕೊಂಡು ಹೋಗುತ್ತಾರೆ ಎಂದರು. ಒಟ್ಟಾರೆಯಾಗಿ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಸೇವೆಗಳನ್ನು ಸಲ್ಲಿಸಿದ ಭಕ್ತರು ಶ್ರೀ ಕೃಷ್ಣನಿಗೆ ವಿವಿದ ನೈವೇದ್ಯಗಳನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿಕೊಂಡರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Exit mobile version