ಕುಮಟಾ: ಪ್ರಸಿದ್ಧ ಶಕ್ತಿಕ್ಷೇತ್ರ ಚಂದಾವರ ಶ್ರೀ ಹನುಮಂತ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಇದೇ ಆಗಸ್ಟ್ 31 ರಂದು ಬೆಳಿಗ್ಗೆ 8 ಗಂಟೆಯಿoದ ರಾಮತಾರಕ ಮಂತ್ರ ಜಪ ಮತ್ತು ಯಜ್ಞ ಹಾಗೂ ಮಹಾ ಅನ್ನಸಂತರ್ಪಣೆಯೊoದಿಗೆ ಸಂಪನ್ನಗೊಳ್ಳಲಿದೆ. ಭಕ್ತಾದಿಗಳು ಒಂದು ಕೋಟಿ ರಮತಾರಕ ಮಂತ್ರ ಪಠಣ ಮಾಡುವ ಸಂಕಲ್ಪ ಮಾಡಿದ್ದರು. ಈಗಾಗಲೇ ಜಪ ಸಂಖ್ಯೆ ಒಂದು ಕೋಟಿಗೂ ಮೀರಿ ಆಗಿದೆ. ಶ್ರೀ ದೇವರ ಸನ್ನಿಧಿಯಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚಿನ ಮಂತ್ರಪಠಣ ನಡೆದಿದೆ.
ಉದ್ಯೋಗಾವಕಾಶ: ಐಟಿಐ, ಡಿಪ್ಲೋಮಾ & ಪದವಿ ಪಾಸಾದವರು ಅರ್ಜಿ ಸಲ್ಲಿಸಬಹು
ಮಂತ್ರ ಪಠಣ ಮಾಡಿದವರ ಹೆಸರಿನಲ್ಲಿ ಸಂಕಲ್ಪ ಮಾಡಿ ಪ್ರಸಾದ ನೀಡಲಾಗುವುದು. ಮಹಾಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಪ್ರತ್ಯೇಕ ಪ್ರಸಾದ ವಿತರಣೆ ಮಹಾಅನ್ನಸಂತರ್ಪಣೆ ಆಯೋಜಿಸಲಾಗಿದೆ. ಆಗಸ್ಟ್ 05 ರಂದು ಪ್ರಾರಂಭವಾದ ರಾಮತಾರಕ ಮಂತ್ರ ಪಠಣವು ಶ್ರೀ ದೇವರ ಭಕ್ತಾದಿಗಳು ಪ್ರತಿದಿನ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪಠಿಸಿ ಲೆಕ್ಕವನ್ನು ಸಮಿತಿಯ ಸದಸ್ಯರಲ್ಲಿ ನೀಡುತ್ತಾ ಬಂದಿದ್ದಾರೆ.
ಅಲ್ಲದೆ ಹನುಮಂತ ದೇವರ ಸನ್ನಿಧಿಯಲ್ಲಿ ಪ್ರತಿ ದಿನ ರಾಮತಾರಕ ಮಂತ್ರ ಪಠಣ ಮಾಡಲಾಗುತ್ತಿದೆ. 31ರ ಶನಿವಾರ ಮಧ್ಯಾಹ್ನ 12-30 ಕ್ಕೆ ಯಜ್ಞದ ಪೂರ್ಣಾಹುತಿ ಹಾಗೂ 01-00 ಗಂಟೆಗೆ ಮಹಾಮಂಗಳಾರತಿ ನೆರವೇರಲಿದ್ದು, ನಂತರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಕಾರಣರಾಗಬೇಕೆಂದು ಕೋರಲಾಗಿದೆ.
ವಿಸ್ಮಯ ನ್ಯೂಸ್, ಕುಮಟಾ