ಕಾರವಾರ: ತಾಲೂಕಿನ ಅಮದಳ್ಳಿ ವ್ಯಾಪ್ತಿಯ ಟೋಲ್ ನಾಕಾ ಬಳಿಯ ದಿಗಂಬರ್ ಪಡ್ತಿ ಎನ್ನುವರ ಮನೆಯ ಕೋಳಿ ಗೂಡಿಗೆ ನುಗ್ಗಿದ್ದ ಭಾರೀ ಗಾತ್ರದ ಹೆಬ್ಬಾವೊಂದು, ಅಲ್ಲಿದ್ದ 3 ದೊಡ್ಡ ಕೋಳಿಗಳನ್ನು ನುಂಗಿತ್ತಲ್ಲದೇ, 14 ಮರಿಗಳನ್ನು ಸಾಯಿಸಿತ್ತು. ಪ್ರತ್ಯೇಕ ಇನ್ನೊಂದು ಸ್ಥಳದಲ್ಲಿ ಕೋಳಿ ಗೂಡಿನ ಬಳಿ ಆಕಸ್ಮಿಕವಾಗಿ ಬಲೆಯಲ್ಲಿ ನಾಗರ ಹಾವೊಂದು ಸಿಲುಕಿಕೊಂಡಿತ್ತು. ಈ ಹೆಬ್ಬಾವು ಮತ್ತು ನಾಗರ ಹಾವನ್ನು ಮಹೇಶ ನಾಯ್ಕ ಅವರು ಸಂರಕ್ಷಿಸಿ , ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಅತ್ಯಂತ ಕ್ಲಿಷ್ಟಕರ ತುರ್ತು ಶಸ್ತ್ರಚಿಕಿತ್ಸೆ ಯಶಸ್ವಿ: ಮಹಿಳೆ, ಮಗುವಿನ ಪ್ರಾಣ ರಕ್ಷಣೆ
ಆತಂಕಗೊoಡಿದ್ದ ಮನೆಯವರು, ಉರಗ ಸಂರಕ್ಷಕ ಅವರ್ಸಾದ ಮಹೇಶ್ ನಾಯ್ಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಮಹೇಶ್ ನಾಯ್ಕ,ಹೆಬ್ಬಾವನ್ನು ಹಿಡಿದು ಸಂರಕ್ಷಣೆ ಮಾಡಿದ್ದಾರೆ.ಈ ಹೆಬ್ಬಾವು ತಾನು ನುಂಗಿದ್ದ ಕೋಳಿಗಳನ್ನು ಹೊರಕಕ್ಕಿ ಸ್ಥಳದಿಂದ ನಾಪತ್ತೆಯಾಗಲು ಪ್ರಯತ್ನಿಸಿತು.
ಪ್ರತ್ಯೇಕ ಇನ್ನೊಂದು ಘಟನೆಯಲ್ಲಿ ಅಂಕೋಲಾ ತಾಲೂಕಿನ ಬೆಳೆಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಂದುಮಠ ಗ್ರಾಮದ ಮನೆಯೊಂದರ ಕೋಳಿ ಶೆಡ್ಡಿನ ಬಳಿ,ದೊಡ್ಡ ಗಾತ್ರದ ನಾಗರಹಾವು, ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿಕೊಂಡು ಜೀವನ್ಮರಣದ ನಡುವೆ ಒದ್ದಾಡುತ್ತಿತ್ತು. ಗೌಡ ಕುಟುಂಬದ ಕರೆಯ ಮೇರೆಗೆ ಸ್ಥಳಕ್ಕೆ ಬಂದು ಬಲೆಯನ್ನು ಕತ್ತರಿಸಿ,ಹಾವನ್ನು ಹೊರತಂದು ಸಂರಕ್ಷಣೆ ಮಾಡುವ ಮೂಲಕ ಮಹೇಶ್ ನಾಯ್ಕ ಅವರು ಸ್ಥಳೀಯರ ಆತಂಕ ದೂರ ಮಾಡಿದರು.
ಹೆಬ್ಬಾವು ಮತ್ತು ನಾಗರಹಾವನ್ನು ಪ್ರತ್ಯೇಕ ಪ್ರತ್ಯೇಕ ಸ್ಥಳಗಳಲ್ಲಿ ಸಂರಕ್ಷಿಸಿ,ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸುರಕ್ಷಿತ ಕಾಡು ಪ್ರದೇಶದಲ್ಲಿ ಬಿಟ್ಟು ಬದಲಾಗಿದೆ ಎಂದು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ತಿಳಿಸಿದರು.