ಪುರಸಭೆ ಸದಸ್ಯೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಣಮಂಜೂರಿ ಮಾಡುವಂತೆ ಸಂಸದರಿಗೆ ಮನವಿ: ಕಾಗೇರಿ ಏನು ಮಾಡಿಯಾರು ಎನ್ನುವ ಪ್ರಶ್ನೆಗೆ ಉತ್ತರವೇನು ?

ಅಂಕೋಲಾ : ಪಟ್ಟಣದ ಕೋಟೆವಾಡ ಹಿಂದೂ ಸ್ಮಶಾನ ಭೂಮಿ,ಸರಕಾರಿ ಆಸ್ಪತ್ರೆಯ ಶವಾಗಾರ ಮತ್ತು ಬಬ್ರುವಾಡ ರಸ್ತೆಯ ಸಿಮೆಂಟ್ ಕಾಂಕ್ರೀಟೀಕರಣ ಸೇರಿದಂತೆ ಈ 3 ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ, ಸ್ಥಳೀಯ ಪುರಸಭೆಯ ಸದಸ್ಯರಾದ ಜಯಾ ಬಾಲಕೃಷ್ಣ ನಾಯ್ಕ ಇವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ, ಶಿರಸಿಯ ಅವರ ಕಾರ್ಯಾಲಯದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಅಮದಳ್ಳಿ ವೀರ ಗಣಪತಿಯ ಅಲಂಕಾರಕ್ಕೆ ಸಿದ್ದಗೊಂಡ ಬೆಳ್ಳಿಯ ಹೊಸ ಮುಖವಾಡ

ಮನವಿಯನ್ನು ಸ್ವೀಕರಿಸಿದ ಕಾಗೇರಿ ಅವರು ಅಂಕೋಲಾದ ಸಾರ್ವಜನಿಕ ಹಿತ ದೃಷ್ಟಿಯಿಂದ ತಾವು ಈ ಮನವಿ ನೀಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರಿ ಮಾಡಿಸಿಕೊಡುವುದು ನನ್ನ ಜವಾಬ್ದಾರಿ ಯೂ ಆಗಿದೆ ಎಂದು ಹೇಳಿ ಸಕಾರಾತ್ಮಕವಾಗಿ ಸ್ವಂದಿಸುವ ಭರವಸೆ ನೀಡಿದರು.

ಜಿಲ್ಲೆಯ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲ ವಿಷಯಗಳನ್ನು ಪ್ರಸ್ತಾಪಿಸಿ,ಕೇಂದ್ರದ ಗಮನ ಸೆಳೆಯುತ್ತಿರುವುದಲ್ಲದೇ, ವೈಯಕ್ತಿಕವಾಗಿಯೂ ಸಂಬಂಧಿತ ಕೇಂದ್ರದ ಮಂತ್ರಿಗಳು,ಇತರೆ ಅಧಿಕಾರಿಗಳು,ಮತ್ತಿತರರನ್ನು ಭೇಟಿಯಾಗಿ ,ಜಿಲ್ಲೆಯ ಕೆಲ ಸಮಸ್ಯೆ ನಿವಾರಣೆಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮನವಿ ಮಾಡುತ್ತಾ,ಶಿರೂರು ಗುಡ್ಡ ಕುಸಿತ ದುರಂತ ಘಟನೆಯಲ್ಲಿ ನೊಂದ ಕುಟುಂಬಗಳಿಗೆ ಕೇಂದ್ರದಿಂದ ವಿಶೇಷ ಪರಿಹಾರ ಘೋಷಣೆಯಾಗಲು ಕಾರಣೀ ಕರ್ತರಾಗುವ ಮೂಲಕ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಯೋಚಿಸುತ್ತ ಯೋಜಿಸುತ್ತ ಮುನ್ನಡೆಯುತ್ತಿರುವ ಕಾಗೇರಿಯವರು,ತಮ್ಮ ಕಾರ್ಯ ಶೈಲಿ ಹಾಗೂ ಜನಪರ ನಡೆ ನುಡಿಗಳ ಮೂಲಕವೇ ಎದುರಾಳಿಗಳ ಬಾಯಿ ಮುಚ್ಚಿಸುತ್ತಿದ್ದಾರೆ.

ತಮ್ಮ ಅಪಾರ ರಾಜಕೀಯ ಅನುಭವವನ್ನು ಧಾರೆಯೆರೆಯುತ್ತಿವುದು,ಅವರ ಅಭಿಮಾನಿಗಳಲ್ಲಿ ಖುಷಿ ತಂದಂತಿದೆ . ಈ ಮೂಲಕ ಕಾಗೇರಿ ಏನು ಮಾಡಿಯಾರು ಎನ್ನುವ ರಾಜಕೀಯ ವಿರೋಧಿಗಳ ಪಾಲಿಗೆ,ಜನನಾಯಕನಾಗಿ ತಕ್ಕ ಉತ್ತರ ನೀಡುತ್ತಿರುವಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version