ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ವಿದ್ಯಾರ್ಥಿನಿ

ಕಾರವಾರ: ಸಿದ್ದಾಪುರ ತಾಲೂಕಿನ ಮುಗ್ದೂರಿನ ಶ್ರೀರಕ್ಷಾ ಹೆಗಡೆ ಅವಲಕ್ಕಿಯ ಮೇಲೆ ರಾಷ್ಟ್ರಗೀತೆಯನ್ನು ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾಳೆ. ಮುಗ್ದೂರಿನ ಕೃಷಿಕ ರವಿಶಂಕರ ರಾಮಚಂದ್ರ ಹೆಗಡೆ ಹಾಗೂ ಗಾಯತ್ರಿ ಹೆಗಡೆ ದಂಪತಿಗಳ ಮಗಳಾದ ಶ್ರೀರಕ್ಷಾ ಹೆಗಡೆ 61 ಅವಲಕ್ಕಿ ಕಾಳುಗಳ ಮೇಲೆ ಕೇವಲ 17 ನಿಮಿಷ 30 ಸೆಕೆಂಡ್‌ಗಳಲ್ಲಿ ರಾಷ್ಟ್ರಗೀತೆಯನ್ನು ಬರೆದು ದಾಖಲೆ ನಿರ್ಮಿಸಿದ್ದಾಳೆ.

ವೇಶ್ಯಾವಾಟಿಕೆ ಆರೋಪ: ಮುರ್ಡೇಶ್ವರದಲ್ಲಿ ಹೊಟೇಲ್ ಮೇಲೆ ದಾಳಿ: ನಾಲ್ವರು ವಶಕ್ಕೆ

ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ತನ್ನ ಹೆಸರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಮಾಣ ಪತ್ರ, ಮೆಡಲ್, ಬ್ಯಾಡ್ಜ್ ದೊರೆತಿದೆ. ಶ್ರೀರಕ್ಷಾ ಹೆಗಡೆ ಶಿರಸಿಯ ಎಂಈಎಸ್ ಕಾಲೇಜಿನಲ್ಲಿ ಬಿಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದು ಈ ಹಿಂದೆ ಅವಲಕ್ಕಿಯ ಮೇಲೆ ಹನುಮಾನ್ ಚಾಲೀಸಾ ಬರೆದಿದ್ದಲ್ಲದೇ , ಬಾಳೆ ಎಲೆಯ ಮೇಲೆ ಅಕ್ಕಿಯಿಂದ ಶ್ರೀರಾಮಚಂದ್ರನ ಚಿತ್ರ ಬರೆದು ಗಮನ ಸೆಳೆದಿದ್ದಳು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version