ಹಲವು ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: ಅವಧಿ ಮೀರಿದ ಹಾಲಿನ ಪ್ಯಾಕೆಟ್ ವಶಕ್ಕೆ

ಕುಮಟಾ: ಆಹಾರ ಸುರಕ್ಷತಾ ಅಧಿಕಾರಿಗಳು ಮುಂಜಾನೆಯಿಂದಲೇ ಕುಮಟಾ ತಾಲೂಕಿನ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹೌದು ತಾಲೂಕಿನ ಹಲವು ಹೊಟೇಲ್, ಬೇಕರಿಗಳಿಗೆ ದಾಳಿ ನಡೆಸಿದ್ದು ಶುಚಿತ್ವ ಹಾಗೂ ಆಹಾರ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೆಲವು ಅಂಗಡಿಗಳಿಗೆ ದಂಡ ಸಹಿತ ಎಚ್ಚರಿಕೆಯನ್ನು ನೀಡಿದ್ದಾರೆ.

ಗಣೇಶ ಚತುರ್ಥಿಗೆ ಕ್ಷಣಗಣನೆ: ಮಣ್ಣಿನ ಮೂರ್ತಿಗೆ ಅಂತಿಮ ಸ್ಪರ್ಶದ ತಯಾರಿ

ಈ ವೇಳೆ ಕುಮಟಾದ ಮಾಸ್ತಿಕಟ್ಟಾದ ನಂದಿನಿ ಮಿಲ್ಕ್ ಫರ‍್ಲರ್ ಮೇಲೆ ದಾಳಿ ನಡೆಸಿ ಅವದಿ ಮೀರಿದ 111 ಹಾಲಿನ ಪ್ಯಾಕೇಟ್‌ನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಅಂಕಿತಾಧಿಕಾರಿಗಳಾದ ಡಾ. ರಾಜ ಶೇಖರ ಅವರ ನೇತೃತ್ವದಲ್ಲಿ ದಾಳಿನಡೆಸಲಾಗಿದೆ. ಈ ವೇಳೆ ಹಾಲಿನ ಪ್ಯಾಕೇಟ್, ಹಾಗೂ ಇತರ ಉತ್ಪನ್ನಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಅವದಿ ಮೀರಿದ ಅಪಾರ ಪ್ರಮಾಣದ‌ ಹಾಲಿನ ಪ್ಯಾಕೇಟ್ ಹಾಗೂ ಬಿಸ್ಕಿಟ್ ಪ್ಯಾಕೆಟ್‌ನ್ನು ವಶಕ್ಕೆ ಪಡೆದು ಆಹಾರ ಸುರಕ್ಷತಾ ಕಾಯ್ದೆ ೫೨ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಜಿಲ್ಲಾ ಅಂಕಿತಾಧಿಕಾರಿಗಳಾದ ರಾಜಶೇಖರ್, ಮುಂಜಾನೆ ಇಂದಲೇ ಕೆಲವು ಹೊಟೇಲ್ ಹಾಗೂ ಬೇಕರಿಗಳಿಗೆ ಪರಿಶೀಲನೆ ನಡೆಸುತ್ತಿದ್ದೇವೆ. ಈ ಸಂರ‍್ಭದಲ್ಲಿ ಕುಮಟಾದ ಮಾಸ್ತಿಕಟ್ಟೆಯ ಬಳಿ ಇರುವ ಹಾಲಿನ ಮಳಿಗೆಗೆ ಭೇಟಿ ನೀಡಿ ತಪಾಸಣೆ ಮಾಡುವಾಗ ಅವದಿ ಮೀರಿದ ಹಾಲಿನ ಪ್ಯಾಕೇಟ್‌ಗಳು ಪತ್ತೆಯಾಗಿದೆ. ಬೇರೆ ಬೇರೆ ಮಾದರಿಯ ೧೧೧ ಹಾಲಿನ ಪ್ಯಾಕೇಟ್‌ಗಳು ೧,೨ ಹಾಗೂ ೩ನೇ ದಿನಾಂಕದ್ದಾಗಿದ್ದು, ಇದರ ಮಾರಾಟವು ಕಾನುನೂ ಬಾಹಿರವಾಗಿದ್ದು, ಅದನ್ನು ನಾವು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದರು. ದಾಳಿಯ ವೇಳೆ ಜಿಲ್ಲಾ ಅಂಕಿತಾಧಿಕಾರಿಗಳಾದ ರಾಜಶೇಖರ್, ಕುಮಟಾ ಆಹಾರ ಸುರಕ್ಷತಾ ಅಧಿಕಾರಿಗಳಾದ ಅರುಣ ವಿ ಕಾಶಿಯವರು ಇದ್ದರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Exit mobile version