ಹೊನ್ನಾವರ: ಗಣೇಶ ಚತುರ್ಥಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಣ್ಣಿನ ಗಣಪತಿಯ ಮೂರ್ತಿಯ ತಯಾರಿ ಜೋರಾಗಿದೆ. ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶದ ತಯಾರಿ ಎಲ್ಲೆಡೆ ನಡೆಯುತ್ತಿದೆ. ಹೊನ್ನಾವರದ ಕರ್ಕಿಯ ಭಂಡಾರಿ ಕೇರಿಯಲ್ಲಿ ಮೂರ್ತಿ ವಿಶೇಷವಾಗಿ ಜಿಲ್ಲೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.
ಗಣೇಶ ಹಬ್ಬದ ವೇಳೆ ಬಹುಮಾನ ಯೋಜನೆ, ಲಾಟರಿ ಟಿಕೆಟ್ ಮಾರಾಟ ನಿಷೇಧ
ಇಲ್ಲಿನ ಮುದ್ದುಗಣಪ, ಇಡಗುಂಜಿ ಗಣಪ, ನವಿಲಿನ ಮೇಲೆ ಕುಳಿತ ಗಣಪ, ಹುಲಿಯ ಮೇಲೆ ಕುಳಿತ ಗಣಪ, ಸಿಂಹಾಸನದಲ್ಲಿ ಕುಳಿತ ಗಣಪ, ಶಿವನ ವೇಷದಲ್ಲಿರುವ ಗಣಪ ಹೀಗೆ ಮಣ್ಣಿನಲ್ಲಿ ತಯಾರಿಸಿದ ಮೂರ್ತಿ ಎಲ್ಲರ ಗಮನಸೆಳೆಯುತ್ತಿದೆ. ಭಂಡಾರಿ ಕೇರಿಯಲ್ಲಿ ತಯಾರಾದ ಗಣಪನನ್ನು ನೋಡಲು ಜನರ ದಂಡು ಹರಿದುಬರುತ್ತಿದ್ದು, ಈ ಬಗ್ಗೆ ಮಾತನಾಡಿದ ಮೂರ್ತಿಕಾರರಾದ ಗಜಾನನ ಭಂಡಾರಿ ನಾವು ಮೂರ್ತಿಯನ್ನು ವಂಶಪಾರoಪರ್ಯ ವೃತ್ತಿಯ ಜೊತೆಗೆ ಮಾಡಿಕೊಂಡು ಬಂದಿದ್ದೇವೆ. ಯಕ್ಷಗಾನದಲ್ಲಿ ವಾದ್ಯ, ಚಂಡೆಯನ್ನು ಬಾರಿಸುವ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇಲ್ಲಿ ತಯಾರಾದ ಮೂರ್ತಿ ಬೇರೆ ಬೇರೆ ತಾಲೂಕಿಗೂ ರವಾನೆಯಾಗುತ್ತದೆ. ಪಿ.ಓ.ಪಿ ಗಳನ್ನು ಬಳಸದೇ ಕೇವಲ ಜೇಡಿಮಣ್ಣಿನಿಂದ ಮೂರ್ತಿಯನ್ನು ತಯಾರಿಸುವುದು ವಿಶೇಷ.. ಅಪಾಯವಲ್ಲದ ಬಣ್ಣಗಳನ್ನು ಬಳಿಯುತ್ತಿದ್ದು ಪರಿಸರ ಸ್ನೇಹಿಯಾಗಿರುವುದು ವಿಶೇಷ. ಕರ್ಕಿ ಗ್ರಾಮದ ಭಂಡಾರಿಯವರ ಮನೆಯವರು 100 ಕ್ಕೂ ಹೆಚ್ಚಿನ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದು, ಅಂತಿಮ ಹಂತದ ಕಾರ್ಯ ಭರದಿಂದ ಸಾಗಿದೆ.