ಶಿಕ್ಷಕನು ವಿದ್ಯಾರ್ಥಿಯನ್ನು ರಾಷ್ಟ್ರ ನಿರ್ಮಾಣದ ಶಿಲ್ಪಿಯಾಗಿಸುವನು

ಸಂಸ್ಕೃತ ಉಪನ್ಯಾಸಕ ಗಣೇಶ ಭಟ್ ಅವರ ವಿಶೇಷ ಲೇಖನ: Happy Teachers Day

ಶಿಕ್ಷಕ-ಅಧ್ಯಾಪಕ-ಉಪಾಧ್ಯಾಯ-ಗುರು-ಆಚಾರ್ಯ ಮುಂತಾದ ಶಬ್ದಗಳು ಪರಸ್ಪರ ಭಿನ್ನವಾಗಿತೋರಿದರೂ, ಇವರೆಲ್ಲರ ಮುಖ್ಯಉದ್ದೇಶ ಮಾತ್ರ ವಿದ್ಯಾರ್ಥಿಗಳಿಗೆ ಜ್ಞಾನಬೋಧೆಯಾಗಿದೆ. ತಂದೆ -ತಾಯಿಯಿಂದ ನಮಗೆ ಈ ಭೌತಿಕ ಶರೀರ ಪ್ರಾಪ್ತವಾದರೆ, ಶಿಕ್ಷಕನಿಂದ ನಮಗೆ ಜ್ಞಾನಶರೀರ ಪ್ರಾಪ್ತವಾಗುವುದು. ಶಿಕ್ಷಕನಿಂದ ದೊರೆತ ಶಿಕ್ಷಣದಿಂದ ವ್ಯಕ್ತಿಗೆ ಅರಿವಿನ ದ್ವಿತೀಯಜನ್ಮ ಲಭಿಸುವುದು. ಮಾರ್ಗದರ್ಶಕ ಶಿಕ್ಷಕನಿಂದಲೇ ವಿದ್ಯಾರ್ಥಿಯೊಬ್ಬ ನಿರ್ದಿಷ್ಟ ಗುರಿ ತಲುಪಬಲ್ಲ. ನಮ್ಮತಂದೆ-ತಾಯಿ ನಮಗೆ ಜನ್ಮನೀಡಿದಕಾರಣಕ್ಕೆ ಪೂಜನೀಯರಾದರೆ, ಶಿಕ್ಷಕನು ನಮ್ಮನ್ನು ಕೌಟುಂಬಿಕ-ಸಾಮಾಜಿಕ-ವ್ಯಾವಹಾರಿಕ-ಔಧ್ಯೋಗಿಕ-ಆರ್ಥಿಕ ಹೀಗೆ ಜೀವನದಎಲ್ಲಾ ಮುಖಗಳಲ್ಲಿ ಪರಿಪೂರ್ಣ-ಸಂಪನ್ನನ್ನಾಗುವಂತೆ ಮಾಡುವಕಾರಣ ಶಿಕ್ಷಕನೂ ಸಹ ತಂದೆ-ತಾಯಿಯಂತೆ ಗೌರವಕ್ಕೆ ಅರ್ಹನು.ಶಿಕ್ಷಕನೊಬ್ಬ ತನ್ನ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಯನ್ನುಅಜ್ಞಾನದಿಂದ ಜ್ಞಾನದೆಡೆಗೆ, ಶೂನ್ಯದಿಂದ ಪೂರ್ಣತೆಯೆಡೆಗೆ, ಕಣಿವೆಯಿಂದ ಶಿಖರದತ್ತ ಕೊಂಡೊಯ್ದು, ಸಮಾಜೋಪಯೋಗಿಯನ್ನಾಗಿ ಮಾಡಿ, ಭವಿಷ್ಯದ ರಾಷ್ಟçನಿರ್ಮಾಣದ ಶಿಲ್ಪಿಯಾಗಿಸುವನು.

ಶ್ರೇಷ್ಠ ಶಿಕ್ಷಕನೆಂದರೆ ಯಾರು?

ಹಾಗೆ ನೋಡಿದರೆ ನಮ್ಮ ಭಾರತೀಯ ಪರಂಪರೆಯಲ್ಲಿ ಉಳಿದ ದೇಶಗಳಿಗಿಂತ ಭವ್ಯವಾದ ಗುರು-ಶಿಷ್ಯರ ದೊಡ್ಡ ಪರಂಪರೆಯೇ ಇದೆ. ಮಹಾದೇವ-ಪರಶುರಾಮ,ಪರಶುರಾಮ-ಭೀಷ್ಮ-ಕರ್ಣ,ವಸಿಷ್ಠ-ವಿಶ್ವಾಮಿತ್ರ-ರಾಮ,ಸೂರ್ಯ-ಹನೂಮಂತ,ಸಾಂದೀಪನಿ-ಕೃಷ್ಣ,ದ್ರೋಣ-ಅರ್ಜುನ ಹೀಗೆ ಗುರು-ಶಿಷ್ಯರ ಆದರ್ಶ ಭವ್ಯ ಪರಂಪರೆಯೇ ನಮ್ಮಲ್ಲಿಇದೆ. ಶಿಕ್ಷಕನೆಂದರೆ ಯಾರು? ಎಂಬ ಪ್ರಶ್ನೆಗೆ ಕಾಳಿದಾಸನು ತನ್ನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ
ಶ್ಲಿಷ್ಟಾಕ್ರಿಯಾ ಕಸ್ಯಚಿದಾತ್ಮಸಂಸ್ಥಾ ಸಂಕ್ರಾಂತಿರನ್ಯಸ್ಯ ವಿಶೇಷಯುಕ್ತಾ|
ಯಸ್ಯೋಭಯಂ ಸಾಧು ಸಶಿಕ್ಷಕಾಣಾಂ ಧುರಿ ಪ್ರತಷ್ಠಾಪಯಿತವ್ಯ ಏವ||

ಬೋಧಿಸುವ ವಿಷಯದಲ್ಲಿತಾನು ಸ್ವತಃಜ್ಷಾನಿಯಾಗಿದ್ದು,ತನಗೆ ತಿಳಿದಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ ತಿಳಿಹೇಳುವ ಸಾಮರ್ಥವನ್ನುಯಾರು ಹೊಂದಿರುತ್ತಾನೊ ಅವನೇ ಶ್ರೇಷ್ಠ ಶಿಕ್ಷಕನು ಎಂದು ಸೊಗಸಾಗಿ ವಿವರಿಸಿದ್ದಾನೆ.

ಭಾರತೀಯ ಪರಂಪರೆಯಲ್ಲಿ ಶಿಕ್ಷಕರ ಸ್ಥಾನ ಮಹತ್ವದ್ದು

ಆರುಣಿಯಂತೆ ಗುರುನಿಷ್ಠೆಯಿದ್ದರೆ,ಕರ್ಣನಂತೆ ಗುರುಭಕ್ತಿಹೊಂದಿದ್ದರೆ, ಏಕಲವ್ಯನಂತೆ ಸಮರ್ಪಣಾಭಾವ ಇದ್ದರೆ, ಶಿಷ್ಯನೊಬ್ಬ ಏನನ್ನೂ ಸಾಧಿಸಬಹುದು, ಎಂಬುದಕ್ಕೆಇವೆಲ್ಲಾ ಕೆಲ ನಿದರ್ಶನಗಳಷ್ಟೆ. ಡಾ.ಸರ್ವಪಲ್ಲಿರಾಧಾಕೃಷ್ಣನ್,ಡಾ.ಎ ಪಿ ಜೆಅಬ್ದುಲ್ ಕಲಾಂ ಮುಂತಾದ ಶ್ರೇಷ್ಠಶಿಕ್ಷಕರನ್ನೂ ಈ ದೇಶಕಂಡಿದೆ. ಡಾ.ಸರ್ವಪಲ್ಲಿರಾಧಾಕೃಷ್ಣನ್ ‌ಅವರು ಸಾರ್ಥಕ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದರು. ಶಿಕ್ಷಣವೆಂದರೆ ಗ್ರಂಥದಲ್ಲಿದೊರಕುವ ಮಾಹಿತಿಯಷ್ಟೇಅಲ್ಲ,ವ್ಯಕ್ತಿಯಲ್ಲಿ ಸಚ್ಚಾರಿತ್ಯ ನಿರ್ಮಾಣ,ಶಿಸ್ತಿನ ಬದುಕು,ಸದ್ಗುಣಗಳ ವಿಕಾಸದೊಂದಿಗೆ,ಯಾವುದೇ ವಿಷಮ ಪರಿಸ್ಥಿತಿಯನ್ನು ಎದುರಿಸುವ,ವ್ಯಕ್ತಿಯನ್ನು ಬಾಹ್ಯ-ಆಂತರಂಗಿಕವಾಗಿ ಸಶಕ್ತನನ್ನಾಗಿಸುವುದೇ ಶಿಕ್ಷಣ. ಇಂದು ವಿಶ್ವವು ಶಾಂತಿ-ಸುಖದಿಂದಇರಲು ಶಿಕ್ಷಣವೊಂದೇ ಮದ್ದು ಎಂಬ ಅಭಿಪ್ರಾಯವನ್ನು ಹೊಂದಿದವರಾಗಿದ್ದರು.ಸ್ವತಂತ್ರಭಾರತದ ಪ್ರಥಮಶಿಕ್ಷಣಆಯೋಗದ ಅಧ್ಯಕ್ಷರಾಗಿ ಪ್ರಾಥಮಿಕದಿಂದ ವಿಶ್ವವಿದ್ಯಾಲಯಶಿಕ್ಷಣದ ತನಕ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆಏರಿಸಲು ಅನೇಕ ಸುದಾರಣಾಕ್ರಮಗಳನ್ನು ಕೈಗೊಂಡರು.ಶಿಕ್ಷಕರಾಗಿ ವೃತ್ತಿಬದುಕನ್ನು ಆಯ್ಕೆಮಾಡಿಕೊಂಡು, ಈ ದೇಶದರಾಷ್ಟçಪತಿ ಹುದ್ದೆಯನ್ನೂ ಅಲಂಕರಿಸಿದ ಡಾ.ಸರ್ವಪಲ್ಲಿರಾಧಾಕೃಷ್ಣನ್‌ಅವರ ಆದರ್ಶಶಿಕ್ಷಕವೃತ್ತಿಬದುಕನ್ನು ಅನುಲಕ್ಷಿಸಿ, ಅವರ ನೆನಪಿನಲ್ಲಿ ಸಪ್ಟೆಂಬರ್ 05 ನ್ನು ಶಿಕ್ಷಕದಿನಾಚರಣೆಯನ್ನಾಗಿಆಚರಿಸುತ್ತಾ ಬಂದಿದ್ದೇವೆ.

ಭಾರತದ ಮಿಸೈಲ್ ಮ್ಯಾನ್‌ಎಂದುಖ್ಯಾತಿಹೊಂದಿದಡಾ.ಎಪಿಜೆಅಬ್ದುಲ್‌ಕಲಾಮ್‌ರವರು ರಾಷ್ಟ್ರಪತಿ‌ಹುದ್ದೆಗೇರಿ ಶಿಕ್ಷಣಬೋಧನೆಯನ್ನು ಪ್ರೀತಿಸಿದವರು. ಒಬ್ಬರು ಶಿಕ್ಷಕರಾಗಿ ರಾಷ್ಟçಪತಿಯಾದರೆ,ಇನ್ನೊಬ್ಬರುರಾಷ್ಟçಪತಿಯಾಗಿ ಬೋಧನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡವರು. ಈ ಇರ್ವರಬದುಕು ಶಿಕ್ಷಕವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಆದರ್ಶಪ್ರಾಯವಾಗಿದೆ.

ಜ್ಞಾನಪಡೆಯಲು ಶಿಕ್ಷಣ ಎಂಬ ಆದರ್ಶವನ್ನು ಬಿಟ್ಟು ನಾವು ಅನೇಕ ವರ್ಷಗಳೇ ಕಳೆದಿದೆ.ಉದ್ಯೋಗಕ್ಕಾಗಿ.ಭವಿಷ್ಯದ ಜೀವಿಕೆಗಾಗಿ ಶಿಕ್ಷಣ ಎಂಬ ನಿಲುವನ್ನು ತಳೆದು ಕೂಡ ಕೆಲವರ್ಷಗಳೇ ಸಂದಿವೆ.ಈ ಕಾರಣಕ್ಕಾಗಿಯೇ ಪಾಲಕ-ಪೋಷಕರಿಂದುತಮ್ಮ ಮಕ್ಕಳನ್ನು ವೃತ್ತಿಆಧಾರಿತಕೋರ್ಸಗೆ ಸೇರಿಸುವಧಾವಂತದಲ್ಲಿದ್ದಾರೆ.ಅದಕ್ಕೆತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಒತ್ತಡದಲ್ಲಿಶಿಕ್ಷಕರಿದ್ದಾರೆ.ಈ ಕಾರಣಕ್ಕೆ ಶಿಕ್ಷಕರಿಂದು ಆ ಮಟ್ಟದ ಫಲಿತಾಂಶವನ್ನು ವಿದ್ಯಾರ್ಥಿಗಳಿಂದ ತರಲು ಕೆಲವೊಮ್ಮೆ ಹೊಡೆದು-ಬಡಿದು,ಬೆದರಿಸಿ-ಒತ್ತಡ ಹೇರುವ ಹಂತಕ್ಕೆತಲುಪಿದ್ದಾರೆ.ಇದಕ್ಕೆಲ್ಲಾ ಸಮಾಜವೇ ನೇರಕಾರಣ ಹೊರತು ಶಿಕ್ಷಕನಲ್ಲ.ಸಮಾಜ ಇಂದು ಶಿಕ್ಷಕನಿಂದ ಎನನ್ನು ನಿರೀಕ್ಷಿಸುತ್ತದಯೋಅದಕ್ಕೆತಕ್ಕಂತೆ ಶಿಕ್ಷಕ ಇಂದು ಬದಲಾವಣೆ ಹೊಂದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು,ಉನ್ನತದರ್ಜೆಯಲ್ಲಿತೇರ್ಗಡೆ ಹೊಂದಬೇಕು ಎಂಬ ಒತ್ತಡದಲ್ಲಿ ಶಿಕ್ಷಣಸಂಸ್ಥೆಗಳಿವೆ.ಅವುಗಳ ನಡುವೆ ಸ್ಪರ್ಧೆಇವೆ.ಇದಕ್ಕೆತಕ್ಕಂತೆ ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಒತ್ತಡದಲ್ಲಿದ್ದಾನೆ.

ಶಿಕ್ಷಣ ಎನ್ನುವುದು ಒಂದು ಸಂಸ್ಕಾರ

ಸರ್ಕಾರವಿಂದು ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ-ಸೃಜನಾತ್ಮಕತೆ-ವೈಜ್ಞಾನಿಕದೃಷ್ಟಿಕೋಣ ಹೆಚ್ಚಿಸಲು ಶಿಕ್ಷಣದಲ್ಲಿ ಹೊಸ-ಹೊಸ ತಂತ್ರಜ್ಞಾನ-ಸಾಧನೆ-ಕೌಶಲಗಳನ್ನು ಎನ್.ಸಿ.ಇ.ಆರ್.ಟಿ ಮೂಲಕ ತರುತ್ತಿದೆ.ಇದನ್ನು ವಿದ್ಯಾರ್ಥಿಗಳಿಗೆ ತಲುಪಲು ಶಿಕ್ಷಕರಿಗೆ ಸೂಕ್ತತರಭೇತಿಯನ್ನುತಜ್ಞಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡುತ್ತಿದೆ.ಶಿಕ್ಷಕರು ಆಧುನಿಕತಂತ್ರಜ್ಞಾನದ ಮೂಲಕ ಇದನ್ನುವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಬಳಸುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಶಿಕ್ಷಕನಿಂದು ವಿದ್ಯಾಗಮನ-ಒನ್ ಲೈನ್ ಬೋಧನೆಗೆತನ್ನನ್ನುತಾನು ಬದಲಾಯಿಸಿಕೊಂಡಿದ್ದಾನೆ. ವಿದ್ಯಾರ್ಥಿಗಳು ಇದಕ್ಕೆತಕ್ಕಂತೆ ಸ್ಪಂದಿಸಬೇಕಷ್ಟೆ.
ನಮ್ಮದೇಶದಲ್ಲಿಂದು ಪ್ರತಿಯೊಬ್ಬ ಹದಿನಾಲ್ಕು ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಖಡ್ಡಾಯ-ಉಚಿತ ಶಿಕ್ಷಣವನ್ನು ಸರ್ಕಾರಕಾನೂನಾತ್ಮಕವಾಗಿಯೇ ಜಾರಿಗೊಳಿಸಿದೆ.ಇಷ್ಟಾಗಿಯೂ ಅನೇಕ ವಿದ್ಯಾರ್ಥಿಗಳು ಇದರಿಂದ ಬೇರೆ ಬೇರೆ ಕಾರಣಗಳಿಂದ ವಂಚಿತರಾಗುತ್ತಿರುವುದುದುರ್ದೈವದ ಸಂಗತಿಯಾಗಿದೆ.ಆದಾಗಿಯೂ ಭಾರತದಲ್ಲಿರುವ ಹೆಚ್ಚಿನ ಶಿಕ್ಷಕರು ತಮ್ಮಲ್ಲಿರುವಜ್ಞಾನವನ್ನು ಪರಿಣಾಮಕಾರಿಯಾಗಿ ನೀಡುತ್ತಿರುವಕಾರಣಕ್ಕಾಗಿಅದೆಷ್ಟೋ ವಿದ್ಯಾರ್ಥಿಗಳು ಜ್ಞಾನವಂತರಾಗಿದ್ದಾರೆ,ಸುಶಿಕ್ಷಿತರಾಗಿದ್ದಾರೆ ಎಂಬುದು ಸಂತೋಷದ ಸಂಗತಿಯಾಗಿದೆ.ಈಗಜಾರಿಗೆತರುತ್ತಿರುವ ರಾಷ್ಟ್ರೀಯ ಶಿಕ್ಷಣನೀತಿಯು ಸಮಾಜ-ಶಿಕ್ಷಕ-ವಿದ್ಯಾರ್ಥಿಸ್ನೇಹಿಯಾಗಿ,ವಿದ್ಯಾರ್ಥಿಯ ಜ್ಞಾನಗ್ರಹಿಕೆಗೆಇನ್ನಷ್ಟು ಪೂರಕ-ಪ್ರೇರಕವಾಗಲಿ.ನಮ್ಮದೇಶವಿಂದುಎಲ್ಲಾವಿಧದಲ್ಲಿಅಭಿವೃದ್ಧಿ ಸಾಧಿಸಿದೆ ಎಂದಾದರೆಅದರಲ್ಲಿ ಶಿಕ್ಷಕನ ಪಾತ್ರ ಬಹಳಷ್ಟಿದೆ.ಇಂದೇನಾದರು ಶಿಕ್ಷಕನ ಗೌರವಕ್ಕೆಚ್ಯುತಿ ಬಂದದಿದ್ದರೆಅದಕ್ಕೆ ಶಿಕ್ಷಕ ಹಾಗೂ ಸಮಾಜಇಬ್ಬರೂ ಹೊಣೆ.ಶಿಕ್ಷಕನು ತನಗೆ ಸಮಾಜ ನೀಡಿದ ಹೊಣೆಗಾರಿಕೆಯನ್ನುಅರಿತು,ತನ್ನ ವಿದ್ಯಾರ್ಥಿಗಳನ್ನು,ಜಗತ್ತನ್ನು ಜ್ಞಾನಗೊಳಿಸುವ ಕಾರ್ಯದಲ್ಲಷ್ಟೇತನ್ನನ್ನುತಾನು ತೊಡಗಿಸಿಕೊಳ್ಳಬೇಕು.ವಿದ್ಯಾರ್ಥಿಗಳ ಪೋಷಕರೂ ಸಹ ಶಿಕ್ಷಕರ ಕುರಿತಾಗಿತಮ್ಮ ಮಕ್ಕಳ ಎದುರಿಗೇಅವರಗೌರವಕ್ಕೆ ಹಾನಿಯುಂಟು ಮಾಡುವಕಾರ್ಯ ಮಾಡಬಾರದು. ಶಿಕ್ಷಕನಲ್ಲಿ ಗೌರವ-ನಿಷ್ಠೆ-ಶೃದ್ಧೆ-ವಿಶ್ವಾಸ-ಪ್ರೀತಿ ಹೊಂದಿದರೆ ಮಾತ್ರ ವಿದ್ಯೆ ಬರುತ್ತದೆ ಎಂಬುದನ್ನು ಪಾಲಕರು ತಮ್ಮ ಮಕ್ಕಳಿಗೆ ತಿಳಿ ಹೇಳಬೇಕಾದುದು ಮುಖ್ಯ.

ಶಿಕ್ಷಣ ಎನ್ನುವುದುಒಂದು ಸಂಸ್ಕಾರ.ಯೋಗ್ಯ ಶಿಕ್ಷಕನಿಂದಲೇ ವಿದ್ಯಾರ್ಥಿಗೆ ಈ ಸಂಸ್ಕಾರದೊರಕುವುದು. ಗೂಗಲ್‌ಗುರುವಿನಿಂದ ಕೇವಲ ಮಾಹಿತಿ ದೊರಕಬಹುದಷ್ಟೆ. ವಿದ್ಯಾರ್ಥಿಯಲ್ಲಿಜ್ಞಾನ, ವ್ಯವಹಾರಕೌಶಲ, ಚಾರಿತ್ರö್ಯನಿರ್ಮಾಣ ಮಾಡುವುದರ ಮೂಲಕ ಆತನ ಸುಂದರಭವಿಷ್ಯ ನಿರ್ಮಾಣ ಮಾಡುವನು ಶಿಕ್ಷಕನೇ. ಅಂತಹ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಸಮಾಜೋಪಯೋಗಿ-ರಾಷ್ಟೊçÃಪಯೋಗಿಯೋಗ್ಯಶಕ್ತಿಯನ್ನಾಗಿ ರೂಪಿಸಿ,ನಿಜವಾದ ರಾಷ್ಟçನಿರ್ಮಾತೃವಾಗಿದ್ದಾನೆ.

ಶ್ರೀಗಣೇಶ ಭಟ್ಟ ಸಂಸ್ಕೃತ ಉಪನ್ಯಾಸಕರು ಸಿದ್ಧನಬಾವಿ, ಕುಮಟಾ
Exit mobile version