ಗಂಗಾವಳಿ ನದಿಯಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ? ಟಿಪ್ಪರ್ ವಶಕ್ಕೆ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ದಾಳಿ

ಅಂಕೋಲಾ : ಮಳೆಗಾಲ ಮುಗಿಯುತ್ತ ಬರಲಾರಂಭಿಸಿದ್ದು , ಶಿರೂರು ಬಳಿ ಗುಡ್ಡ ಕುಸಿತದ ದುರಂತದ ಪರಿಣಾಮ ,ಗಂಗಾವಳಿ ನದಿಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ಹಾಗೂ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಪುನರಾರಂಭವಾಗುವ ಲಕ್ಷ್ಮಣ ಗೋಚರಿಸುತ್ತಿದೆ. ಇದೇ ವೇಳೆ ಜಿಲ್ಲಾ ಧಿಕಾರಿಗಳು, ಎಸ್ಪಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿ-ಕಿರಿಯ ಅಧಿಕಾರಿಗಳ ತಂಡ ಅಂಕೋಲಾಕ್ಕೆ ಬಂದು ಹೋಗುತ್ತಿರುತ್ತಾರೆ.

ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?

ಹೀಗಿದ್ದೂ ಕೆಲವು ಅಕ್ರಮ ದಂಧೆ ಕೋರರು ಯಾರಿಗೂ ಕ್ಯಾರೇ ಅನ್ನದೇ ಹಾಡು ಹಗಲೇ ಮತ್ತು ಕೆಲವೊಮ್ಮೆ ರಾತ್ರಿ ವೇಳೆ ತಮ್ಮ ಅಕ್ರಮ ಮರಳು ಗಾರಿಕೆ ದಂಧೆಯನ್ನು ಬಿಂದಾಸ್ ಆಗಿ ತಾಲೂಕಿನ ಗಂಗಾವಳಿ ನದಿಯಲ್ಲಿ ಆರಂಭಿಸಿದಂತಿದೆ.ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ವಶಕ್ಕೆ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ, ಹಿಲ್ಲೂರ ರಸ್ತೆಯ ಮೊಗಟಾ ಮೊರಳ್ಳಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಆಶಾ, ಸಿಬ್ಬಂದಿಗಳಾದ ವಿನೋದ, ಶಶಾಂಕ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಸುಮಾರು 10 ಮೀ ನಷ್ಟು ಅಕ್ರಮ ಮರಳು ತುಂಬಿದ್ದ ಟಿಪ್ಪರ್ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸುಮಾರು 30 ಮೀ ಅಕ್ರಮ ಮರಳು ದಾಸ್ತಾನು ಇತ್ತು ಎನ್ನಲಾಗಿದೆ.ಅಕ್ರಮ ದಂಧೆ ಕೋರರ ಪ್ರಭಾವ,ಇತರೆ ಕೆಲ ಕಾರಣಗಳಿಂದ ಕಳೆದ 8-10 ವರ್ಷಗಳಲ್ಲಿ ,ಈ ಭಾಗದಲ್ಲಿ ಯಾವೊಬ್ಬ ಅಧಿಕಾರಿಯು ದಾಳಿ ನಡೆಸಿರಲಿಲ್ಲ ಎನ್ನಲಾಗಿದ್ದು, ಆದರೆ ಪ್ರಥಮ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ದಾಳಿ ನಡೆದಿದ್ದು,ಮಾಲು ಸಮೇತ ವಾಹನ ಜಪ್ತಪಡಿಸಿಕೊಂಡ ಇಲಾಖೆಯ ಕ್ರಮದ ಕುರಿತು,ಪ್ರಜ್ಞಾವಂತ ಜನತೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.

ಗಂಗಾವಳಿ ನದಿಯುವುದಕ್ಕೂ ಅಲ್ಲಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಲೇ ಇದ್ದು, ಸಂಬಂಧಿತ ಸ್ಥಳೀಯ ಕೆಲ ಅಧಿಕಾರಿಗಳು ಮತ್ತು ಆಯಾ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವುದೇಕೆ ಎಂಬ ನಾಗರಿಕ ಪ್ರಶ್ನೆಗೆ,ಸಂಬಂಧಿಸಿದವರೇ,,ತಮ್ಮ ಕರ್ತವ್ಯ ಜವಾಬ್ದಾರಿ ನಿಭಾಯಿಸಿ ಉತ್ತರ ನೀಡುವರೇ ಕಾದುನೋಡಬೇಕಿದೆ. ಇಲ್ಲದಿದ್ದರೆ ಅಂತಹ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಕ್ರಮ ದಂಧೆ ಕೋರರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version