ಅಂಕೋಲಾ: ತಾಲೂಕಿನ ಪುರಸಭೆಯಿಂದ ವರ್ಗಾವಣೆಗೊಂಡು ಇತ್ತೀಚಿಗಷ್ಟೇ ಮಂಗಳೂರಿನ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಎಂ.ಆರ್.ಸ್ವಾಮಿ, ಅದೇ ಪಟ್ಟಣ ಪಂಚಾಯತಿಯ ಇಂಜಿನಿಯರ್ ನಾಗರಾಜ್ ಜೊತೆ ಸೇರಿ, ಕ್ಲಾಸ್ 1 ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಗಂಗಾವಳಿ ನದಿಯಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ? ಟಿಪ್ಪರ್ ವಶಕ್ಕೆ
5 ನೇ ಹಣಕಾಸು ಯೋಜನೆಯಲ್ಲಿ ಮಂಗಳೂರಿನ ಕಿನ್ನಿಗೋಳಿ ಪಟ್ಟಣ ಪಂಚಾಯತ ವ್ಯಾಪ್ತಿಯ, ಸರಕಾರಿ ಕೆರೆ ಅಭಿವೃದ್ಧಿ ಗುತ್ತಿಗೆ ಪಡೆದು, ಕೆಲಸ ನಿರ್ವಹಿಸಿದ್ದ ಗುತ್ತಿಗೆ ಕಾಮಗಾರಿಯ ಬಿಲ್ ಮೊತ್ತ, ಅಂದಾಜು 10 ಲಕ್ಷ್ಯಕ್ಕೆ ಸಮೀಪ ಇದ್ದು , ಅದರ ಮಂಜೂರಾತಿ ಬಗ್ಗೆ ಪಟ್ಟಣ ಪಂಚಾಯತ್ ಇಂಜಿನಿಯರ್ ಅವರಲ್ಲಿ ವಿಚಾರಿಸಿದಾಗ,ಅವರು ಗುತ್ತಿಗೆದಾರನ ಬಳಿ ತನಗೆ ಮತ್ತು ಮತ್ತು ಮುಖ್ಯಾಧಿಕಾರಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು,ಜೂನಿಯರ್ ಇಂಜಿನಿಯರ್ ನಾಗರಾಜ್ ತನ್ನ ಪಾಲಿನ ಮುಂಗಡವಾಗಿ ರೂ 7000 ಪಡೆದುಕೊಂಡಿದ್ದರು.
ಅದಾದ ಬಳಿಕ ಬೇಡಿಕೆ ಇಟ್ಟಿದ್ದ ಹಣದ ಪೈಕಿ ಇಂಜನಿಯರ್ ನಾಗರಾಜು ಅವರು ರೂ 30000, ಮುಖ್ಯಾ ಧಿಕಾರಿ ರೂ15000 ಲಂಚ ಸ್ವೀಕರಿಸುತ್ತಿದ್ದಾಗ, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಖೆಡ್ಡಾಗೆ ಬಿದ್ದಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಎಂ.ಎ ನಟರಾಜ ಅವರ ಮಾರ್ಗದರ್ಶನದಲ್ಲಿ,ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರು,ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ ಯಶಸ್ವೀ ಕಾರ್ಯಾಚರಣೆ ಕೈಗೊಂಡಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿಯಷ್ಟೇ ಅಂಕೋಲಾ ದಿಂದ ವರ್ಗಾವಣೆಗೊಂಡು ತಮ್ಮ ಸ್ಥಾನ ತೆರವು ಮಾಡಿದ್ದ ಎಂ ಆರ್ ಸ್ವಾಮಿ, ಕಿನ್ನಿಗೋಳಿ ಗೆ ಹಾಜರಾಗಿ ತಿಂಗಳು ಕಳೆಯುವುದರಲ್ಲಿಯೇ ತನ್ನ ಲಂಚಾವತಾರದ ಹಪಾಪಿತನ ಮಾಡಲು ಹೋಗಿ,ಕಾನೂನಿನ ಕಂಬಿ ಎಣಿಸುವಂತಾಗಿದೆ. ಈ ಹಿಂದೆ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೇ ಆಡಳಿತಾತ್ಮಕವಾಗಿ ಸೊರಗಿದಂತಿದ್ದ ಅಂಕೋಲಾ ಪುರಸಭೆಯಲ್ಲಿ, ಸ್ವಾಮಿ ಮಾಡಿದ್ದೆ ಆಡಳಿತ ಎನ್ನುವಂತೆ ಕೆಲ ಬಡವರ,ಮತ್ತಿತರರ ಅಸಮಾಧಾನಕ್ಕೂ ಕಾರಣವಾದಂತಿತ್ತು.ಆದರೆ ಅವರ ಅಧಿಕಾರ ಹಾಗೂ ಕೆಲವೊಮ್ಮೆ ದರ್ಪಕ್ಕೆ ಹೆದರಿ,ಕೆಲವರು ದೂರು ನೀಡದೇ ಒಳಗೊಳಗೆ ಸ್ವಾಮಿಯನ್ನು ಶಪಿಸಿದಂತಿತ್ತು.
ಕೊನೆಗೂ ಸ್ವಾಮಿಯ ಅಸಲಿಯತ್ತು ಲೋಕಾಯುಕ್ತರ ಎದುರು ರೆಡ್ ಹೆಂಡ್ ಆಗಿ ಬಯಲಾಗಿದ್ದು,ಆ ಸ್ವಾಮಿ ಇಲ್ಲಿಂದ ತೊಲಗಿರುವುದೇ ನಮ್ಮ ಅದೃಷ್ಟ ಎಂದು ಈ ಹಿಂದೆ ಆತನ ಆಡಳಿತದಿಂದ ನೊಂದಂತಿರುವ ಕೆಲ ಸಾರ್ವಜನಿಕರು ತಮ್ಮ ತಮ್ಮೊಳಗೆ ಮಾತನಾಡಿಕೊಂಡಂತಿತ್ತು.ಮುಖ್ಯಾಧಿ ಧಿಕಾರಿಯೆಂ ಸ್ವಾಮಿಯ ಜೊತೆ ಲಂಚಕ್ಕೆ ಕೈ ಚಾಚಿ, ಸ್ವಾಮಿ ಕಾರ್ಯದ ಜೊತೆ ಸ್ಪ ಕಾರ್ಯ ಮಾಡಿಕೊಳ್ಳಲು ಹೋದ ಜೂನಿಯರ್ ಇಂಜಿನಿಯರನೂ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ.
ಇತ್ತೀಚೆಗಷ್ಟೇ ಅಂಕೋಲಾ ಮೂಲದ,ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಪ್ರವೀಣ್ ನಾಯಕ ಎನ್ನುವವರು ,ಇತ್ತೀಚೆಗಷ್ಟೇ ಕಾರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದು,ಬಿಡುಗಡೆಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಸ್ಥಳೀಯ ಪಂಚಾಯಿತಿಗಳಲ್ಲಿ ಈ ಸ್ವತ್ತು ಖಾತೆ, ಕಾಮಗಾರಿ ಬಿಲ್ ಮಂಜೂರಿ,ಹೊಸ ಲೈಸೆನ್ಸ್ ನೀಡುವುದು ಮತ್ತಿತರ ಸಂದರ್ಭಗಳಲ್ಲಿ ಲಂಚದ ಬೇಡಿಕೆ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಅಂಶವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ