ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ನಡೆಯುತ್ತಿರುವ ಮೂರನೇ ಹಂತದ 5 ನೇ ದಿನದ ಶೋಧ ಕಾರ್ಯದ ವೇಳೆ ನಾನಾ ಕಾರಣಗಳಿಂದ ನಿರೀಕ್ಷಿತ ಫಲಿತಾಂಶ ಸಿಗದೇ,ಮತ್ತೆ ಮುಂದಿನ ಕಾರ್ಯಚರಣೆ ಬಗ್ಗೆ ನಿರೀಕ್ಷಿಸುವಂತಾಗಿದೆ . ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ನಾಪತ್ತೆಯಾದವರ ಹಾಗೂ ವಾಹನಗಳ ಶೋಧ ಕಾರ್ಯಾಚರಣೆ ಮೂರನೇ ಹಂತ ತಲುಪಿದ್ದು, 5 ನೇ ದಿನದ ಶೋಧ ಕಾರ್ಯಾಚರಣೆ ಮಂಗಳವಾರದ ಸಾಯಂಕಾಲ 5 ಘಂಟೆ ವರೆಗೆ ನಿರೀಕ್ಷಿತ ಫಲಿತಾಂಶ ದೊರೆಯದೇ ಮತ್ತೆ ನಿರೀಕ್ಷೆಯ ಕಣ್ಣುಗಳಿಂದಲೇ ಮುಂದಿನ ಕಾರ್ಯಾಚರಣೆಯನ್ನು ಕಾದು ನೋಡುವಂತಾಗಿದೆ.
ಉದ್ಯೋಗ: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ
ಕಳೆದ 2-3 ದಿನಗಳಲ್ಲಿ ಗ್ಯಾಸ್ ಟ್ಯಾಂಕರ್ ವಾಹನದ ಫ್ರಂಟ್ ಎಕ್ಸೆಲ್, ಇಂಜಿನ್,ನಾಲ್ಕು ಚಕ್ರಗಳ ಸಮೇತ ಹೌಜಿಂಗ್ ಮತ್ತಿತರ ಬಿಡಿ ಭಾಗಗಳು ಪತ್ತೆಯಾಗಿದ್ದವಾದರೂ,ದೇಶದ ಕುತೂಹಲ ಕೆರಳಿಸಿರುವ ಕೇರಳ ಮೂಲದ ಅರ್ಜುನ್ ಲಾರಿ ಪತ್ತೆಯಾಗಿರಲಿಲ್ಲ. ಈ ನಡುವೆ ಡ್ರೆಜ್ಜರ್ ಯಂತ್ರದ ಮೂಲಕ ಸಿ4(ನಾಲ್ಕನೇ ಪಾಯಿಂಟ್) ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಲಾರಿಯ ಕ್ರಾಶ್ ಗಾರ್ಡ್ ದೊರಕಿದೆ ಎನ್ನಲಾಗಿತ್ತು.
ಮೊದಲ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ರಾಡಾರ್ ತಂತ್ರಜ್ಞಾನದ ಮೂಲಕ ನಾಲ್ಕು ಪಾಯಿಂಟ್ ಗಳನ್ನು ಗುರುತಿಸಿ ನಾಲ್ಕನೇ ಪಾಯಿಂಟ್ ಗುರುತಿಸಿರುವ ಸ್ಥಳದಲ್ಲಿ ಕೇರಳದ ಲಾರಿ ಇರುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಲಾರಿಯ ಬಿಡಿಭಾಗ ಪತ್ತೆಯಾಗಿದೆ.
ವಿಶ್ರಾಂತ ಸೇನಾಧಿಕಾರಿ ಮೇಜರ್ ಜನರಲ್ ಇಂದ್ರಬಾಲನ್ ಅವರ ಸೇವೆಯನ್ನು ಮತ್ತೆ ಪಡೆಯಲಾಗಿದ್ದು, ಶಾ ಸಕ ಸತೀಶ ಸೈಲ್ ಮತ್ತು ಆಡಳಿತ ವ್ಯವಸ್ಥೆಯ ವಿಶೇಷ ಪ್ರಯತ್ನ ಹಾಗೂ ವಿನಂತಿ ಮೇರೆಗೆ,ಅವರು ದೆಹಲಿಯಿಂದ ಅಂಕೋಲಾದ ಶಿರೂರು ಘಟನಾ ಸ್ಥಳಕ್ಕೆ ಮತ್ತೆ ಬಂದು ಹೋಗಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದು ಗುರುತಿಸಿರುವ ನಾಲ್ಕನೇ ಪಾಯಿಂಟ್ ನಲ್ಲಿ ನೀರಿನ ಆಳದಲ್ಲಿ ಲಾರಿ ಇದ್ದು ಅದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ, ಮಣ್ಣು ತೆರುವು ಮಾಡಿ ಲಾರಿ ಮೇಲೆಕ್ಕೆ ಎತ್ತಬೇಕಾಗ ಬಹುದು ಎನ್ನಲಾಗುತ್ತಿದೆ.
ಡ್ರೆಜ್ಜಿಂಗ್ ಟೀಮ್ ನೊಂದಿಗೆ ಬಂದಿರುವ ಕೆಲ ವಿಶೇಷ ಮುಳುಗು ತಜ್ಞರು ಕಳೆದ 2-3 ದಿನಗಳಲ್ಲಿ ಗ್ಯಾಸು ಟ್ಯಾಂಕರ್ ಲಾರಿ ಮತ್ತಿತರ ಬಿಡಿ ಭಾಗಗಳನ್ನು ಪತ್ತೆ ಹಚ್ಚಿದ್ದರಾದರೂ, ಮಳೆ ಮತ್ತಿತರ ಕಾರಣಗಳಿಂದ ನೀರಿನ ಹರಿವಿನ ವೇಗ ಮತ್ತು ರಾಡಿ ಬಣ್ಣದಿಂದ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗುತ್ತಿದೆ. ವಾತಾವರಣ ತಿಳಿಗೊಂಡರಷ್ಟೇ ಬೇಕಿದ್ದು ಶೋಧ ಕಾರ್ಯಕ್ಕೆ ಬಲ ಬರಲಿದೆ.
ಐದನೇ ದಿನದ ಕಾರ್ಯಾಚರಣೆ ವೇಳೆ ವಾಹನವೊಂದರ ಬಾನೆಟ್ ಇಲ್ಲವೇ ಇತರೆ ರೀತಿಯ ಕೆಂಪು ಬಣ್ಣದ ಕಬ್ಬಿಣದ ಪಟ್ಟಿಗಳುಳ್ಳ ತಗಡು ದೊರೆತಿದೆಯಾದರೂ, ಸಂಜೆ 5 ಘಂಟೆ ವರೆಗೆ ನಿರೀಕ್ಷಿತ ಫಲಿತಾಂಶ ದೊರೆಯದೇ,ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಿ,ಹೊಸ ನಿರೀಕ್ಷೆಗಳೊಂದಿಗೆ ಕಾದು ನೋಡುವಂತಾಗಿದೆ. ಒಟ್ಟಾರೆ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ