Important
Trending

ಬೋಟ್ ನಲ್ಲಿದ್ದ ಹೊರರಾಜ್ಯದ ಕಾರ್ಮಿಕ ನೀರು ಪಾಲು: ವಿಮಾನದ ಮೂಲಕ ಮೃತ ದೇಹ ಸಾಗಾಟ ?

ಅಂಕೋಲಾ: ಕಿಂಗ್ ಫಿಶ್ ಬಅಂಕೋಲಾ : ಪರ್ಷಿಯನ್ ಬೋಟ್ ಒಂದರಲ್ಲಿ ಕೆಲಸಕ್ಕಿದ್ದ ಹೊರ ರಾಜ್ಯದ ಕಾರ್ಮಿಕ ನೋರ್ವ,ಆಯತಪ್ಪಿ ನೀರಿನಲ್ಲಿ ಬಿದ್ದು ಮಾರನೇ ದಿನ ಮೃತದೇಹವಾಗಿ ಪತ್ತೆಯಾದ ಘಟನೆ ತಾಲೂಕಿನ ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ಸಂಭವಿಸಿದೆ. ಓಡಿಸ್ಸಾ ರಾಜ್ಯದ ಸುಂದರಗಡ ಜಿಲ್ಲೆಯ ಕುಮಾರಮಾ ಗ್ರಾಮದ ನಿವಾಸಿ ಸರೋಜ ಕಾರ್ತಿಕ ನಾಯ್ಕ (32) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.

ಇದನ್ನೂ ಓದಿ: ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಈತ ತಾನು ಕೆಲಸಕ್ಕಿದ್ದ ಕಿಂಗ್ ಫಿಶ್ ಬೋಟಿನಲ್ಲಿ ಅರಬ್ಬೀ ಸಮುದ್ರ ಮೀನುಗಾರಿಕೆ ಮುಗಿಸಿ ಸ. 29 ರಾತ್ರಿ ಅಂಕೋಲಾ ತಾಲೂಕಿನ ಬೆಲೇಕೇರಿಯ ಬಂದರು ದಕ್ಕೆ ಗೆ ಬಂದು ಬೋಟಿನ ಲಿದ್ದ ಮೀನುಗಳನ್ನು ಖಾಲಿ ಮಾಡಿ, ನಂತರ ಬೋಟ್ ನ ರೋಪನ್ನು ದಕ್ಕೆಗೆ ಕಟ್ಟಲು ಹೋದವನು ಆಕಸ್ಮಾತ ಕಾಲು ಜಾರಿ ಆಯ ತಪ್ಪಿ ದಕ್ಕೆ ಹತ್ತಿರದ ಸಮುದ್ರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದವನು, ದಿನಾಂಕ 30 – 09 – 24 ರಂದು ಮೃತ ದೇಹವಾಗಿ ಪತ್ತೆಯಾಗಿದ್ದಾನೆ.

ನಂತರ ಮೃತ ದೇಹವನ್ನು ತಾಲೂಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಕಾನೂನು ಕ್ರಮ ಕೈಗೊಂಡು, ವಾರಸುದಾರರಿಗೆ ಹಸ್ತಾಂ ತರಿಸಲಾಗಿದ್ದು,ಅವರು ವಿಮಾನದ ಮೂಲಕ ಒಡಿಸ್ಸಾ ರಾಜ್ಯಕ್ಕೆ ಮೃತದೇಹ ಸಾಗಿಸಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಮತ್ತಷ್ಟು ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button