ಮುರುಡೇಶ್ವರ: ಇಲ್ಲಿನ ಕಡಲತೀರದಲ್ಲಿ ಕಾರು ಚಲಾಯಿಸಿದ ವ್ಯಕ್ತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪ್ರವಾಸಿ ಕಾರು ಚಾಲಕನೊಬ್ಬ ಸಮುದ್ರಕ್ಕೆ ಕಾರು ಇಳಿಸಿದ್ದು, ಮರಳಿನಲ್ಲಿ ವೇಗವಾಗಿ ಮತ್ತು ಅಪಾಯಕಾರಿಗಿ ಚಾಲನೆ ಮಾಡಿದ್ದಾನೆ. ಜೊತೆಗೆ ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಅತ್ಯಂತ ಅಪಾಯಕಾರಿ ರೀತಿಯಲ್ಲಿ ಈತ ದಂಡೆ ಮೇಲೆ ಕಾರು ಚಲಾಯಿಸಿದ ವಿಡಿಯೋ ವೈರಲ್ ಆಗಿತ್ತು. ಬೆಂಗಳೂರು ನೊಂದಣಿ ಸಂಖ್ಯೆಯ ಸಿಪ್ಟ್ ಡಿಸೈರ್ ಕಾರು ಇದಾಗಿದ್ದು, ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಿ, ನಂತರ ಆತನಿಗೆ ದಂಡ ವಿಧಿಸಿ ಬುದ್ಧಿ ಕಲಿಸಿದರು.
ವಿಸ್ಮಯ ನ್ಯೂಸ್, ಮುರುಡೇಶ್ವರ