Join Our

WhatsApp Group
Important
Trending

ತಪ್ಪಿಸಿಕೊಳ್ಳಲು ಯತ್ನಿಸಿದ ಗೋಹತ್ಯೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

‌ಹೊನ್ನಾವರ : ತಾಲೂಕಿನ ಸಾಲ್ಕೊಡು ಕೊಂಡಾಕುಳಿ ಗೋ ಹತ್ಯೆ ಪ್ರಕರಣದ ಸಂಬಂಧ ಬಂದಿತ ಆರೋಪಿ ಓರ್ವನನ್ನು ಪೊಲೀಸರು ತನಿಖೆಗೆ ಕರೆದೊಯ್ಯುವಾಗ ಆರೋಪಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ ಪೂರ್ವ ವೃತ್ತ ನಿರೀಕ್ಷಕ ಹಾಗೂ ಇಬ್ಬರು ಪೊಲೀಸರ ಮೇಲೆ ದಾಳಿ ಮಾಡಿದ ಘಟನೆ ಸಾಯಂಕಾಲ ದುಗ್ಗುರು ಗುಡ್ಡದಲ್ಲಿ ಸಂಭವಿಸಿದೆ.

ಆರೋಪಿಯ ಹಲ್ಲೆಯಿಂದ ಜೀವನ ರಕ್ಷಿಸಿಕೊಳ್ಳಲು ಪೊಲೀಸರು ಗುಂಡಿನ ದಾಳಿ ಮಾಡಿದ್ದರಿಂದ ಆರೋಪಿ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಪೊಲೀಸ್ ಅಧಿಕಾರಿ ಹಾಗೂ ಪೊಲೀಸರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಜೀವಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡ ಆರೋಪಿಯನ್ನು ಕಾರವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಯು ತಾನು ಆಕಳನ್ನು ವದಿಸಲು ಬಳಸಿದ ಮಾರಕಾಸ್ತ್ರಗಳನ್ನು ಪ್ರಕರಣದ ಸಂಬಂಧ ತೋರಿಸುವುದಾಗಿ ನಂಬಿಸಿ ಪೊಲೀಸರನ್ನು ದುಗ್ಗುರು ಗುಡ್ಡಕ್ಕೆ ಕರೆದೊಯ್ದಿದ್ದ ಎನ್ನಲಾಗಿದೆ ಮಾರಕಾಸ್ತ್ರ ಪತ್ತೆ ಆಗುತ್ತಿದ್ದಂತೆ ಆರೋಪಿ ಅದೇ ಆಯುಧಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಎಲ್ಲಾ ಸಂಗತಿಗಳು ಪೊಲೀಸರಿಂದ ಇನ್ನಷ್ಟೇ ಖಚಿತ ಆಗಬೇಕಿದೆ

ವಿಸ್ಮಯ ನ್ಯೂಸ್ ವಿವೇಕ್ ಶೇಟ್ ಹೊನ್ನಾವರ

Back to top button