ಹೊನ್ನಾವರ: ಕಾಸರಕೋಡಿನ ರೋಷನ್ ಮೊಹಲ್ಲಾ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ಹೆಚ್. ಪಿ. ಕಂಪನಿಯ ಎಲ್. ಪಿ. ಜಿ ಗ್ಯಾಸ್ ತುಂಬಿಕೊoಡು ಮಂಗಳೂರಿನಿoದ ಗೋವಾಕ್ಕೆ ತೆರಳುತ್ತಿರುವ ಟ್ಯಾಂಕರ್ , ರಾಷ್ಟೀಯ ಹೆದ್ದಾರಿ 66ರ ಕಾಸರಕೋಡನಲ್ಲಿ ಡಿವೈಡರ್ ಗೆ ಹೊಡೆದು, ಡಿವೈಡರ್ ಮೇಲೆ ಪಲ್ಟಿಯಾಗಿದೆ. ಪಲ್ಟಿಯಾದ ಸಂದರ್ಭದಲ್ಲಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನಲೆಯಲ್ಲಿ ಸ್ಥಳೀಯರು ಕೆಲಕಾಲ ಆತಂಕಗೊoಡಿದ್ದರು. ಆದ್ರೆ, ಗ್ಯಾಸ್ ಸೋರಿಕೆಯಾಗಿಲ್ಲ ಎಂಬ ಪ್ರಾರಂಬಿಕ ಮಾಹಿತಿಯಿಂದ ನಿಟ್ಟುಸಿರುಬಿಟ್ಟರು. ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ ನಡೆದಿದ್ದು, ಠಾಣೆಯ ಅಧಿಕಾರಿ, ಸಿಬ್ಬಂದಿಯವರು ಸ್ಥಳದಲ್ಲಿದ್ದು, ಮುಂಜಾಗೃತೆಗಾಗಿ ಭಟ್ಕಳ ಠಾಣೆಯ ಜಲವಾಹನವನ್ನು ತರಿಸಿಕೊಳ್ಳಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಬೇಕಾಗಿದ್ದಾರೆ
ಹೊನ್ನಾವರ ತಾಲೂಕಿನ ಗುಣವಂತೆಯ ಪ್ರಸಿದ್ಧ ಉದಯ್ ಏಜೆನ್ಸಿಯಲ್ಲಿ ಸೆಲ್ಸ್ ಮೆನ್ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ಸಂಬಳ, Insentive, Expenses ಕೊಡಲಾಗುವುದು. ದ್ವಿಚಕ್ರ ವಾಹನ ಇದ್ದವರಿಗೆ ಮೊದಲ ಆದ್ಯತೆ ಎಂದು ಮಾಹಿತಿ ನೀಡಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ. 9844634272
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ