Follow Us On

WhatsApp Group
Important
Trending

ಸಿದ್ದಾಪುರದಲ್ಲಿ ಹಳ್ಳದಲ್ಲಿ ಕೊಚ್ಚಿಹೋದ ಕಾರು: ನಾಲ್ವರ ಸಾವು?

ಜಲಪಾತ ವೀಕ್ಷಿಸಿ ಮರಳುತ್ತಿದ್ದಾಗ ದುರ್ಘಟನೆ
ಅರ್ಧ ಕೀಲೋಮೀಟರ್ ಕೊಚ್ಚಿಕೊಂಡು ಹೋದ ಕಾರು
ಕಾರಿನಲ್ಲಿ ಇದ್ದರು ಆರು ಮಂದಿ?

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳದಲ್ಲಿ ಕೊಚ್ಚಿಹೋಗಿದ್ದು, ನಾಲ್ವರು ಮೃತಪಟ್ಟಿದ್ದಾನೆ ಎನ್ನಲಾಗಿದೆ. ತಲೂಕಿನ ಕೋಡನಮನೆ ಎಂಬಲ್ಲಿ ಸೇತುವೆಯಿಂದ ಕೆಳಗುರುಳಿದ ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದೆ. ಆದರೆ ಕಾರಿನ ಬಾಗಿಲುಗಳು ಇನ್ನೂ ಮುಚ್ಚಿಯೇ ಇದ್ದು ಪೊಲೀಸರು ಸ್ಥಳಕ್ಕೆ ಬಂದ ನಂತರ ನಿಖರ ಮಾಹಿತಿ ತಿಳಿಯಬೇಕಿದೆ.


ಉಂಚಳ್ಳಿ ಜಲಪಾತ ವೀಕ್ಷಿಸಿ ಮರುಳುತ್ತಿದ್ದಾಗ ಹುಬ್ಬಳ್ಳಿ ಮೂಲದ ಆರು ಮಂದಿ ಇದ್ದ ಕಾರು ಕೋಡ್ನಮನೆ ಎಂಬಲ್ಲಿ ಸೇತುವೆಯಿಂದ ಕೆಳಗುರುಳಿದೆ. ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಈ ವಿಷಯ ಬೆಳಕಿಗೆ ಬಂದಿದೆ.


ಕಾರಿನಲ್ಲಿ ಎಷ್ಟು ಜನರಿದ್ದರು ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ, ಕಾರ್ಯಾಚರಣೆ ಪ್ರಗತಿಯಲ್ಲಿದೆ. ನಿನ್ನೆ ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಾಗಾಗಿ ಕಾರಿನ ಚಾಲಕನಿಗೆ ತಿರುವಿನಲ್ಲಿ ರಸ್ತೆ ಸರಿಯಾಗಿ ಕಾಣದೆ ಹಳ್ಳದಲ್ಲಿ ಹೋಗಿ ಬಿದ್ದಿದೆ ಎನ್ನಲಾಗಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button