ಹೊನ್ನಾವರದಲ್ಲಿ 13, ಕುಮಟಾದಲ್ಲಿ 8 ಕೇಸ್ ದೃಢ

ಎರಡು ತಾಲೂಕಿನ ಇಂದಿನ ಕರೊನಾ ವಿವರ
ಗ್ರಾಮೀಣ ಭಾಗದಲ್ಲೇ ಆತಂಕ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು 13 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ. ಇಂದು ವರದಿಯಾದ ಎಲ್ಲಾ ಪ್ರಕರಣವು ಗ್ರಾಮೀಣ ಭಾಗದಲ್ಲಿಯೆ ಕಾಣಿಸಿಕೊಂಡಿದೆ. ತಾಲೂಕಿನ ಜನಕ್ಕಡಕಲ್ ನಲ್ಲಿ – 3 ಸಾಲಕೋಡ-3 ಗೇರಸೋಪ್ಪಾ-2 ಸುರಕಟ್ಟೆ- ದಿಬ್ಬಣಗಲ್- ಮಾವಿನಕುರ್ವಾ-ಅನಿಲಗೋಡ- ಮೋಳ್ಕೋಡ ಭಾಗದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.


ತಾಲೂಕಿನ ಜನಕ್ಕಡಕಲ್ ನ 48 ವರ್ಷದ ಪುರುಷ, 25 ವರ್ಷದ ಯುವಕ, 44 ವರ್ಷದ ಮಹಿಳೆ, ಸಾಲಕೋಡಿನ 27 ವರ್ಷದ ಯುವತಿ, 24 ವರ್ಷದ ಯುವಕ, 27 ವರ್ಷದ ಯುವತಿ, ಗೇರುಸೋಪ್ಪಾ ಬಂಗಾರಮಕ್ಕಿಯ 41 ವರ್ಷದ ಪುರುಷ, 35 ವರ್ಷದ ಮಹಿಳೆ, ಸುರಕಟ್ಟೆಯ 47 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಅನೀಲಗೋಡಿನ 39 ವರ್ಷದ ಮಹಿಳೆ, ದಿಬ್ಬಣಗಲ್ ನ 27 ವರ್ಷದ ಯುವತಿ, ಮಾವಿನಕುರ್ವಾದ 46 ವರ್ಷದ ಪುರುಷ, ಮೋಳ್ಕೋಡದ 58 ವರ್ಷದ ಮಹಿಳೆಗೂ ಸೋಂಕು ಪತ್ತೆಯಾಗಿದೆ. ತಾಲೂಕಾ ಆಸ್ಪತ್ರೆಯಿಂದ ಮೂವರು ಡಿಸ್ಚಾರ್ಜ್ ಆಗಿದ್ದಾರೆ, ತಾಲೂಕಾ ಆಸ್ಪತ್ರೆಯಲ್ಲಿ 10 ಜನರು ಮತ್ತು ಮನೆಯಲ್ಲಿ 52 ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿ ಇಂದು 8 ಕೇಸ್:

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟೂ 8 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಬಾಡ, ಮಣಕೋಣ, ಮಾದನಗೇರಿ, ಹೆರವಟ್ಟಾ, ದಿವಗಿ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಬಾಡದ 73 ವರ್ಷದ ವೃದ್ಧ, ಮಣಕೋಣದ 28 ವರ್ಷದ ಯುವಕ, ಮಾದನಗೇರಿಯ 33 ವರ್ಷದ ಪುರುಷ, 28 ವರ್ಷದ ಯುವತಿ, ಹೆರವಟ್ಟಾದ 23 ವರ್ಷದ ಯುವಕ, ಕುಮಟಾದ 8 ವರ್ಷದ ಬಾಲಕಿ, 42 ವರ್ಷದ ಮಹಿಳೆ, ದಿವಗಿಯ 31 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 8 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1622 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version