ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯು ಕರೊನಾ ನಿಯಂತ್ರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿ, ಜಿಲ್ಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ . ಜಿಲ್ಲೆಯಾದ್ಯಂತ ಸುಮಾರು 0.2 % ಕೊರೋನಾ ಪಾಸಿಟಿವ್ ಸಂಖ್ಯೆ ದಾಖಲಾಗಿದೆ.
ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವುದಕ್ಕೆ ಕಾರಣೀಕರ್ತರಾದ ಜಿಲ್ಲಾಡಳಿತಕ್ಕೆ, ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಈ ಯಶಸ್ಸು ಸೇರಬೇಕು ಎಂದು ಹೇಳಿದರು.
ವಿಸ್ಮಯ ನ್ಯೂಸ್, ಯಲ್ಲಾಪುರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾದ ನ್ಯಾನೋ ಕಾರು : ಸ್ಥಳದಲ್ಲೇ ಚಾಲಕ ಸಾವು
- ಯಶಸ್ವಿಯಾಗಿ ನಡೆದ ಯುನಿಫೆಸ್ಟ್ : 35 ಕಾಲೇಜುಗಳ 500 ವಿದ್ಯಾರ್ಥಿಗಳು ಭಾಗಿ
- ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
- ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ