Follow Us On

WhatsApp Group
Uttara Kannada
Trending

ಉತ್ತರಕನ್ನಡ ಜಿಲ್ಲೆಯ ಇಂದಿನ ಕರೊನಾ ಮಾಹಿತಿ ಇಲ್ಲಿದೆ

ಶಿರಸಿಯಲ್ಲಿ 8 ಕೇಸ್ ದೃಢ
ಹೊನ್ನಾವರದಲ್ಲಿ ನಾಲ್ಕು ಪಾಸಿಟಿವ್
ಕುಮಟಾದಲ್ಲಿ ಮೂವರಿಗೆ ಸೋಂಕು

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು 3 ಕರೊನಾ ಕೇಸ್ ದಾಖಲಾಗಿದೆ. ಈ ಮೂರು ಪ್ರಕರಣವು ಸಹ ಪಟ್ಟಣದ ನೆಲ್ಲಿಕೇರಿಯಲ್ಲಿಯೇ ಕಂಡುಬAದಿದೆ. ಕುಮಟಾ ನೆಲ್ಲಿಕೇರಿಯ 39 ವರ್ಷದ ಮಹಿಳೆ, 68 ವರ್ಷದ ವೃದ್ದ, 16 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಇಂದು 9 ಪ್ರಕರಣ ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,713 ಏರಿಕೆಯಾಗಿದೆ.

ಹೊನ್ನಾವರದಲ್ಲಿ ನಾಲ್ಕು ಪಾಸಿಟಿವ್:

ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ನಾಲ್ವರಲ್ಲಿ ಪಾಸಿಟಿವ್ ಬಂದಿದೆ. ಮುಗ್ವಾ ಸುರಕಟ್ಟೆಯಲ್ಲಿ ಮೂರು ಜನರಲ್ಲಿ ಮತ್ತು ನೀಲಕೋಡಿನ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಗ್ವಾ ಸುರಕಟ್ಟೆಯ 78 ವರ್ಷದ ಪುರುಷ, 72 ವರ್ಷದ ಮಹಿಳೆ, 12 ವರ್ಷದ ಬಾಲಕಿ, ನೀಲಕೋಡಿನ 65 ವರ್ಷದ ಪುರುಷ ಸೇರಿ ಇಂದು ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆಯಲ್ಲಿ 34 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಿರಸಿಯಲ್ಲಿ 8 ಕೇಸ್ ದೃಢ:

ಶಿರಸಿ: ತಾಲೂಕಿನಲ್ಲಿ ಇಂದು 8 ಮಂದಿಗೆ ಕರನಾ ದೃಢಪಟ್ಟಿದೆ. ಇಂದು ಮಂಜವಳ್ಳಿಯಲ್ಲಿ 1, ಬೆಳ್ಳೂರು 1, ಅಂಬಾಗಿರಿ 3, ರಂಗಾಪುರ 1, ಹೆಬ್ಬತ್ತಿ 1, ಅಮ್ಮಚ್ಚಿಮನೆಯಲ್ಲಿ ಒಂದು ಕೊರೊನಾ ಪಾಸಿಟಿವ್ ಬಂದಿದೆ. ಇದೇ ವೇಳೆ ಇಂದು 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಯಲ್ಲಾಪುರದಲ್ಲಿ ಯಾವುದೇ ಕೇಸ್ ಇಲ್ಲ:

ಯಲ್ಲಾಪುರದಲ್ಲಿ ಇಂದು ಯಾವುದೇ ಕೊರೊನಾ ಕೇಸ್ ಪತ್ತೆಯಾಗಿಲ್ಲ ಎಂಬುದು ಸಂತಸದ ವಿಷಯವಾಗಿದ್ದು, ನಿಯಂತ್ರಣಕ್ಕೆ ಬರುತ್ತಿದೆ.

ಅಂಕೋಲಾದಲ್ಲಿಂದು 1 ಕೊವಿಡ್ ಕೇಸ್ : ಗುಣಮುಖ 4

ಅಂಕೋಲಾ : ಆರೋಗ್ಯ ಇಲಾಖೆಯ ಹೆಲ್ತ ಬುಲೇಟಿನಲ್ಲಿ ಪ್ರಕಟವಾದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟೂ 82 ಕೊರೊನಾ ಕೇಸ್‍ಗಳು ಧೃಡಪಟ್ಟಿವೆ. ಇದೇ ವೇಳೆ ತಾಲೂಕಿನಲ್ಲಿ 1 ಕೊವಿಡ್ ಕೇಸ್ ಪತ್ತೆಯಾಗಿದೆ. ಪಟ್ಟಣ ವ್ಯಾಪ್ತಿಯ ಇಸ್ಲಾಂಪುರದ 27ರ ಯುವಕನೊರ್ವನಲ್ಲಿ ಕೊವಿಡ್ ಪಾಸಿಟಿವ್ ಲಕ್ಷಣ ಕಂಡು ಬಂದಿದೆ. ಈ ಮೂಲಕ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 806ಕ್ಕೆ ತಲುಪಿದೆ.

ಗುಣಮುಖರಾದ 4 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ಲ್ಲಿರುವ 15 ಮಂದಿ ಸಹಿತ ಒಟ್ಟೂ 26 ಸಕ್ರಿಯ ಪ್ರಕರಣಗಳಿವೆ. ಕೇಸ್‍ಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿರುವುದು ಸಮಾದಾನಕರ ವಿಷಯವಾದರೂ ಸಹ, ಮುಂಬರುವ ಹಬ್ಬದ ದಿನ ಮತ್ತಿತರ ಸಂದರ್ಭಗಳಲ್ಲಿ ಸಾರ್ವಜನಿಕರು ಮೈಮರೆಯದೇ ಸೂಕ್ತ ಮುಂಜಾಗೃತೆ ಕೈಗೊಂಡು ಆರೋಗ್ಯ ಜಾಗೃತಿಗೆ ಕೈಜೋಡಿಸಬೇಕೆನ್ನುವುದು ಆರೋಗ್ಯ ಇಲಾಖೆಯ ಕೋರಿಕೆಯಾಗಿದೆ.

ಜಿಲ್ಲೆಯಲ್ಲಿ 82 ಕರೊನಾ ಕೇಸ್:

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 82 ಕರೊನಾ ಕೇಸ್ ದಾಖಲಾಗಿದ್ದು, ಇದೇ ವೇಳೆ ವಿವಿಧ ಆಸ್ಪತ್ರೆಯಿಂದ 78 ಮಂದಿ ಬಿಡುಗಡೆಯಾಗಿದ್ದಾರೆ. ಇಂದು 82 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12904ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ 17, ಭಟ್ಕಳದಲ್ಲಿ ಇಂದು ಒಂದು ಕೇಸ್ ದೃಢಪಟ್ಟಿದೆ.

ವಿಸ್ಮಯ ನ್ಯೂಸ್, ನಾಗೇಶ್ ದೀವಗಿ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Back to top button