ಮಾಹಿತಿ
Trending

ಅಂಕೋಲೆಯ ರೇಣುಕಾ ರಮಾನಂದರ ಕಥೆಗೆ ಬೆಳ್ಳಿಯ ಪದಕ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಏರ್ಪಡಿಸಿದ್ದ ” ದಿ|ಜಯತೀರ್ಥ ರಾಜಪುರೋಹಿತ ದತ್ತಿ” ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಉತ್ತರಕನ್ನಡ ಅಂಕೋಲೆಯ ಕವಯತ್ರಿ, ಕಥೆಗಾರ್ತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ರೇಣುಕಾ ರಮಾನಂದರ ಕಥೆ ‘ ಬಾಳ ಪಯಣ’ಕ್ಕೆ ದ್ವಿತೀಯ ಬಹುಮಾನ ಮತ್ತು ಬೆಳ್ಳಿಪದಕ ಲಭಿಸಿದೆ.

ಸುಧಾ ಪತ್ರಿಕೆಯ ಸಂಪಾದಕರಾದ ರಘುನಾಥ್ ಚ ಹ ಅವರ ‘ಗೋರಿ’ ಕಥೆ ಮೊದಲ ಬಹುಮಾನ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದು ಮೂರನೇ ಬಹುಮಾನ ಮತ್ತು ಕಂಚಿನಪದಕವನ್ನು ಕಥೆಗಾರ ಕನಕರಾಜ ಆರನಕಟ್ಟೆ ಪಡೆದುಕೊಂಡಿದ್ದಾರೆ

ಅಂಕೋಲೆಯ ಪರಿಸರ,ಜನಜೀವನ, ಆಡುನುಡಿ, ಮುಂತಾದವುಗಳನ್ನು ತನ್ನ ಕಥೆ,ಕವಿತೆ,ಅಂಕಣಗಳಲ್ಲಿ ಕಾಪಿಟ್ಟುಕೊಂಡು ಬರೆವ ರೇಣುಕಾ ತಮ್ಮ ಪ್ರಥಮ ಕವನ ಸಂಕಲನ ಮೀನುಪೇಟೆಯ ತಿರುವಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಡೆದವರು.

ವಿಸ್ಮಯ ನ್ಯೂಸ್ ಅಂಕೋಲಾ

Related Articles

Back to top button