ಜಿಲ್ಲೆಯಲ್ಲಿ ಇಂದು 38 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13,152 ಕ್ಕೆ ಏರಿಕೆಯಾಗಿದೆ. 214 ಸಕ್ರೀಯ ಪ್ರಕರಣಗಳಿವೆ. ಇದೇ ವೇಳೆ ಕಾರವಾರದಲ್ಲಿ ಅತಿಹೆಚ್ಚು ಅಂದರೆ 18, ಶಿರಸಿ1, ಸಿದ್ದಾಪುರದಲ್ಲಿ ಒಂದು ಕೇಸ್ ದೃಢಪಟ್ಟಿದೆ.
ಕುಮಟಾದಲ್ಲಿ ಮೂರು ಕೇಸ್:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 3 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾಸೂರ್ ಮತ್ತು ಹಿರೇಗುತ್ತಿ ಭಾಗದಲ್ಲಿ ಪ್ರಕರಣ ಪತ್ತೆಯಾಗಿದೆ.ಮಾಸೂರಿನ 48 ವರ್ಷದ ಪುರುಷ, ಹಿರೇಗುತ್ತಿಯ 65 ವರ್ಷದ ವೃದ್ಧೆ ಹಾಗೂ ಕುಮಟಾದ 75 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1914 ಕ್ಕೆ ಏರಿಕೆಯಾಗಿದೆ.
ಅಂಕೋಲಾದಲ್ಲಿ ಏಳು ಪಾಸಿಟಿವ್:
ಅಂಕೋಲಾ : ತಾಲೂಕಿನಲ್ಲಿ ಗುರುವಾರ 7 ಹೊಸ ಕೊವಿಡ್ ಕೇಸ್ಗಳು ದಾಖಲಾಗಿದೆ. ಲೈನ್ ಲಿಸ್ಟ್ ಪ್ರಕಾರ ಹಾರವಾಡ, ಬಡಗೇರಿ, ಬೆಳಂಬಾರ ಮತ್ತಿತರೆಡೆ ಕೆಲ ಸೊಂಕಿನ ಪ್ರಕರಣಗಳು ಪತ್ತೆಯಾಗಿದೆ ಎನ್ನಲಾಗಿದೆ.
ಗುಣಮುಖರಾದ ಓರ್ವರನ್ನು ಬಿಡುಗಡೆಗೊಳಿಸಿಲಾಗಿದ್ದು, ಹೋಂ ಐಸೋಲೇಶನ್ನಲ್ಲಿರುವ 13 ಮಂದಿ ಸಹಿತ ಒಟ್ಟೂ 21 ಪ್ರಕರಣಗಳು ಸಕ್ರಿಯವಾಗಿದೆ. 22 ರ್ಯಾಟ್ ಮತ್ತು 162 ಆರ್ಟಿಪಿಸಿಆರ್ ಸೇರಿದಂತೆ ಒಟ್ಟೂ 184 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ.
ಯಲ್ಲಾಪುರದಲ್ಲಿಂದು ಒಂದು ಸಾವು
ಯಲ್ಲಾಪುರ: ತಾಲೂಕಿನಲ್ಲಿ ಇಂದು ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21 ಕ್ಕೆ ಏರಿದೆ.
ಇಂದು ಮಲವಳ್ಳಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಅವರು ಮೃತಪಟ್ಟಿದ್ದಾರೆ.
ಹೊನ್ನಾವರದಲ್ಲಿ ನಾಲ್ಕು ಕೇಸ್:
ಹೊನ್ನಾವರ: ಕಳೆದ ಮೂರನಾಲ್ಕು ದಿನಗಳಿಂದ ಹೊನ್ನಾವರ ತಾಲೂಕಿನಲ್ಲಿ ಅಷ್ಟಾಗಿ ಕರೊನಾ ಕೇಸ್ ಕಾಣಿಸಿಕೊಂಡಿರಲಿಲ್ಲ. ಆದರೆ, ಇಂದು 4 ಜನರಲ್ಲಿ ಸೋಂಕು ದೃಢಪಟ್ಟಿದೆ.
ಪಟ್ಟಣ ವ್ಯಾಪ್ತಿಯಲ್ಲಿ 1, ಗ್ರಾಮೀಣ ಭಾಗವಾದ ಅಳ್ಳಂಕಿ-ಬಳ್ಕೂರ-ಅನಂತವಾಡಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಟ್ಟಣದ 45 ವರ್ಷದ ಪುರುಷ, ಗ್ರಾಮೀಣ ಭಾಗವಾದ ಅಳ್ಳಂಕಿಯ 59 ವರ್ಷದ ಪುರುಷ, ಬಳ್ಕೂರಿನ 22 ವರ್ಷದ ಯುವತಿ, ಅನಂತವಾಡಿಯ 54 ವರ್ಷದ ಪುರುಷ ಸೇರಿ ಇಂದು 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ & ವಿಲಾಸ ನಾಯಕ ಅಂಕೋಲಾ