ಶಿರಸಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನಿರ್ಭಯ ಯೋಜನೆಯಡಿ ಶಿರಸಿ ಉಪ ವಿಭಾಗದ ಪೊಲಿಸರಿಗೆ ಕರ್ತವ್ಯ ನಿರ್ವಹಣೆಗಾಗಿ ಏಳು ಬೈಕ್ ನೀಡಲಾಗಿದೆ. ಶಿರಸಿ ಉಪ ವಿಭಾಗದ ಡಿವೈಎಸ್‍ಪಿ ರವಿ ಡಿ ನಾಯ್ಕ್ ಅವರು ನೂತನವಾಗಿ ಬಂದಿರುವ ವಾಹನಗಳಿಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಎದುರು ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ರಚಿತವಾದ ‘ಶರಾವತಿ’ ಪೊಲೀಸ್ ಪಡೆಗೆ ಗಸ್ತು ತಿರುಗಲು ಶಿರಸಿ ಉಪವಿಭಾಗದ ಎಲ್ಲ ಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು 7 ಹೊಸ ಹೊಂಡಾ ಬೈಕ್ ಗಳನ್ನು ಒದಗಿಸಿದ್ದಾರೆ. ಈ ಗಸ್ತು ವಾಹನ ಸಿಬ್ಬಂದಿಗಳು ಶಾಲೆ, ಕಾಲೇಜು, ಮಾರುಕಟ್ಟೆ, ಕಾರ್ಮಿಕ ವಲಯದಲ್ಲಿ ಸಂಚರಿಸಲಿದ್ದು, ಸಾರ್ವಜನಿಕರ ದೂರು ಕರೆಗೆ ಸ್ಪಂದಿಸುವರು.
ವಿಸ್ಮಯ ನ್ಯೂಸ್, ಶಿರಸಿ