ಮಾಹಿತಿ
Trending

ನಾಪತ್ತೆಯಾಗಿದ್ದವರು ಪತ್ತೆ: ಅನಾಥಾಶ್ರಮ ಸೇರಿದ ಭಿಕ್ಷುಕಿಯರು

ಜೊಯಿಡಾ: ಕಳೆದ ಒಂದು ತಿಂಗಳಿoದ ಜೊಯಿಡಾ ತಾಲೂಕಿನ ವಿವಿಧೆಡೆ ಭಿಕ್ಷೆ ಬೇಡಿಕೊಂಡು ತಿರುಗುತ್ತಿದ್ದ ಎರಡು ಮಹಿಳೆಯರನ್ನು ಪೊಲೀಸ್ ಇಲಾಖೆ ಮತ್ತು ಸ್ಥಳಿಯರ ಸಹಕಾರದಲ್ಲಿ ಸಿದ್ದಾಪುರ ಅನಾಥಾಶ್ರಮಕ್ಕೆ ಕಳುಹಿಸಿಕೊಡಲಾಯಿತು.

ಕಳೆದ ಹಲವು ದಿನಗಳಿಂದ ಜೊಯಿಡಾ ಬಸ್ ನಿಲ್ದಾಣದಲ್ಲಿ ಮತ್ತು ಕುಂಬಾರವಾಡಾದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರಂತೆ ಬಿಕ್ಷೆ ಬೇಡಿಕೊಂಡು ತಿರುಗುತ್ತಿದ್ದ ಎರಡು ಮಹಿಳೆಯರನ್ನು ಸಿದ್ದಾಪುರದಲ್ಲಿನ ನಾಗರಾಜ ನಾಯ್ಕ ಅವರ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅನಾಥಾಶ್ರಮಕ್ಕೆ ಕಳುಹಿಸುವುದಕ್ಕೆ ಸಿದ್ಧತಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಂತೆ ಇಲ್ಲಿನ ಭಿಕ್ಷುಕಿಯರು ನಾಪತ್ತೆಯಾಗಿದ್ದರು. ಒಂದು ವಾರದ ನಂತರ ಇವರು ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಮಾಹಿತಿ ಪೊಲೀಸ್ ಇಲಾಖೆಗೆ ತಿಳಿದು ಬರುತ್ತಿದ್ದಂತೆ, ಡಿವೈಎಸ್ಪಿ ಶಿವಾನಂದ ಚಲವಾದಿ ಮಾರ್ಗದರ್ಶನದಲ್ಲಿ ಜೊಯಿಡಾ ಸಿಪಿಐ ಬಾಬಾ ಸಾಹೇಬ್ ಹುಲ್ಲಣ್ಣನವರ,ಪಿಎಸೈ ಲಕ್ಷ್ಮಣ ಪುಜಾರ, ನಂದಿಗದ್ದೆ,ಯರಮುಖ ಭಾಗದ ಜನರ ಸಹಕಾರದೊಂದಿಗೆ ಅಂಬ್ಯುಲೆನ್ಸ್ ನಲ್ಲಿ ಜೊಯಿಡಾ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ.

ಇಲ್ಲಿ ಕೊವಿಡ್ ಪರೀಕ್ಷೆ ನಡೆಸಿದ ನಂತರ ಜಿ.ಪಂ ಸದಸ್ಯ ರಮೇಶ ನಾಯ್ಕ, ಜೊಯಿಡಾ ಪ್ರೇಸ್ (ರಿ) ಅಧ್ಯಕ್ಷ ಗಿರೀಶ ಭಾಗ್ವತ ಮತ್ತು ಸದಸ್ಯರು ,ಸಂತೋಷ ಮಂಥೆರೋ,ದಶರಥ ನಾಯ್ಕ, ಲಕ್ಷ್ಮಣ ಪೂಜಾರ,ನಂದಿಗದ್ದಾ ಪಿಡಿಓ ಮಹ್ಮದ್ ಹನೀಪ ಮುಂತಾದವರ ಸಹಕಾರದೊಂದಿಗೆ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮ ಸಿದ್ದಾಪುರದಿಂದ ಬಂದoತಹ ನಾಗರಾಜ ನಾಯ್ಕ ಇವರೊಂದಿಗೆ ಅನಾಥಾಶ್ರಮಕ್ಕೆೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

ಅನಾಥರಿಗೆ ಮಾನವೀಯ ಹಸ್ತ ಚಾಚಿದ ನಾಗರಾಜ ನಾಯ್ಕ ಮತ್ತು ಮಮತಾ ನಾಯ್ಕ ನಿಜಕ್ಕೂ ಅಭಿನಂದಾರ್ಹರು. ಸಿದ್ದಾಪುರದಿಂದ ಜೊಯಿಡಾ ಬಂದು ಎರಡು ಅನಾಥರನ್ನು ತಮ್ಮ ವಾಹನದ ಮೂಲಕ ಕರೆದುಕೊಂಡು ಹೋಗಿ ಆಶ್ರಯ ಕಲ್ಪಿಸಿ ಮಾನವೀಯತೆ ತೋರಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಾಕ್ತವಾಗಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button