
ಭಟ್ಕಳ: ತಾಲೂಕಿನ ಮುರುಡೇಶ್ವರದ ಉತ್ತರ ಕೊಪ್ಪದ
ಕೊಂಕಣಾತಿಬೈಲಿನಲ್ಲಿ ಮಹಿಳೆಯೋರ್ವರ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೊಲೆಯಾದ ಮಹಿಳೆ ಲಕ್ಷ್ಮಿ ಕೃಷ್ಣ ನಾಯ್ಕ ಉತ್ತರ ಕೊಪ್ಪದ ನಿವಾಸಿ ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ತಲೆಯ ಭಾಗಕ್ಕೆ ದೊಡ್ಡ ಗಾಯವಿರುವುದು ಕಂಡು ಬಂದಿದ್ದು, ಮೃತ ವ್ಯಕ್ತಿ ಗಂಡ ಎರಡು ವರ್ಷದ ಹಿಂದೆ ಮೃತಪಟ್ಟಿದ್ದ.
ಸ್ಥಳಕ್ಕೆ ಮುರುಡೇಶ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದು . ಈ ಕೊಲೆ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ










