Join Our

WhatsApp Group
ಮಾಹಿತಿ
Trending

ಶ್ರೀ ಮಾರಿಕಾಂಬಾ ದೇವಿಗೆ ನೂತನ ಬೆಳ್ಳಿಕಿರೀಟ ಸಮರ್ಪಣೆ

ಶಿರಸಿ : ಶ್ರೀ ಮಾರಿಕಾಂಬಾ ದೇವಿಗೆ ನೂತನವಾಗಿ ತಯಾರಿಸಲಾದ ಬೆಳ್ಳಿ ಕಿರೀಟವನ್ನು ಇಂದು ಧಾರ್ಮಿಕ ವಿಧಾನದಂತೆ ಪೂಜೆ ಸಲ್ಲಿಸುವ ಮೂಲಕ ಶ್ರೀ ದೇವಿಗೆ ಅಲಂಕರಿಸಲು ಅರ್ಪಣೆ ಮಾಡಲಾಯಿತು. ಈ ಸಮಯದಲ್ಲಿ ದೇವಾಲಯದ ಅಧ್ಯಕ್ಷರಾದ ಡಾ. ವೆಂಕಟೇಶ.ಎಲ್. ನಾಯ್ಕ, ಉಪಾಧ್ಯಕ್ಷರಾದ ಮನೋಹರ. ಜಿ. ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ. ಎಮ್. ಕಾನಡೆ, ಶಾಂತಾರಾಮ. ಎನ್. ಹೆಗಡೆ, ಶ್ರೀ ದೇವಸ್ಥಾನದ ಸರಾಫರಾದ ಶ್ರೀಕಾಂತ ಶೇಟ್, ಶ್ರೀ ದೇವಸ್ಥಾನದ ಬಾಬುದಾರ ಮುಖ್ಯಸ್ಥರಾದ ಜಗದೀಶ ಕುರುಬರ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button