ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೋ ರಕ್ಷಣಾ ವೇದಿಕೆ ತನ್ನ ಸಮಾಜಮುಖಿ ಕಾರ್ಯವೈಖರಿ ಮೂಲಕ ಗಮನಸೆಳೆದೆ. ರಸ್ತೆ ಅಪಘಾತ, ಅಂಗವೈಕಲ್ಯ, ಅನಾಥವಾಗಿ ಬಿದ್ದಿರುವ ಗೋವುಗಳನ್ನು ರಕ್ಷಿಸಿ, ಜನಮೆಚ್ಚುಗೆ ಗಳಿಸಿದೆ. ಮಂಗಳವಾರ ತಾಲೂಕಿನ ಉಪ್ಪೋಣಿಯ ತೂಗುಸೇತುವೆಯ ಹತ್ತಿರ ಒಂದು ಗೋಮಾತೆ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತು. ಅದನ್ನು ಇಂದು ಬೆಳಿಗ್ಗೆ ಸ್ಥಳೀಯ ಗೋ ಪ್ರೇಮಿಗಳು ಹಾಗೂ ಗೋ ರಕ್ಷಣಾ ವೇದಿಕೆಯ ಸದಸ್ಯರು ಜೆಸಿಬಿ ಯಂತ್ರದ ಸಹಾಯದ ಮೂಲಕ ಗುಂಡಿ ತೋಡಿ ಮುಚ್ಚುವ ವ್ಯವಸ್ಥೆ ಮಾಡಿದರು. ನಿರಂತರವಾಗಿ ಇಂಥ ಕೆಲಸ-ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಗೋ ರಕ್ಷಣಾ ವೇದಿಕೆ (ರಿ.) ಹೊನ್ನಾವರದ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಸ್ಮಯ ನ್ಯೂಸ್, ಹೊನ್ನಾವರ