ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ ಬಡ ಕುಟುಂಬ
ಕಿಡ್ನಿಯನ್ನು ಬದಲಾಯಿಸುವಂತೆ ವೈದ್ಯರ ಸಲಹೆ
ದಾನಿಗಳಿಂದ ಬೇಕಿದೆ ನೆರವಿನ ಹಸ್ತ
ಕಾರವಾರ: ಆರೋಗ್ಯವೇ ಭಾಗ್ಯ ಎನ್ನುವಂತೆ, ಮನುಷ್ಯನಿಗೆ ಆರೋಗ್ಯದ ಮುಂದೆ ಯಾವ ಸಂಪತ್ತು ಕೂಡ ದೊಡ್ಡದಲ್ಲ. ಎಷ್ಟೆ ಬಡತನವಿದ್ದರೂ ಸಹ ಆರೋಗ್ಯವೊಂದು ಚೆನ್ನಾಗಿದ್ದರೆ ಕೂಲಿ ನಾಲಿ ಮಾಡಿಯಾದರೂ ಸಹ ಕುಟುಂಬದ ನಿರ್ವಹಣೆಯನ್ನು ಹೇಗೋ ಮಾಡಿಕೊಂಡು ಹೋಗಬಹುದು. ಆದರೆ ಒಂದೆಡೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸಂದರ್ಭದಲ್ಲಿಯೇ ದೊಡ್ಡ ದೊಡ್ಡ ಕಾಯಿಲೆಗಳು ಒಕ್ಕರಿಸಿಕೊಂಡರೆ ಮಾತ್ರ ಅಂತಹವರ ಕಷ್ಟ ಹೇಳತೀರದು. ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟಾದ ತೀರಾ ಬಡಕುಟುಂಬದ ಪುರುಷನೋರ್ವನಿಗೆ ಎರಡೂ ಕಿಡ್ನಿಯೂ ವಿಫಲಗೊಂಡಿದ್ದು, ಇದೀಗ ಅವರ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ.
ಕುಮಟಾ ತಾಲೂಕಿನ ದೀವಗಿ ಗ್ರಾಮದ ತಂಡ್ರಕುಳಿಯ ಗಣೇಶ ವೆಂಕಟ ಅಂಬಿಗ ಎನ್ನುವವರು ಕಳೆದ 3 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದು, ಇಷ್ಟು ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೇ ಇದೀಗ ಇವರ ಆರೋಗ್ಯ ತೀರಾ ಹದಗೆಟ್ಟಿರುವ ಕಾರಣದಿಂದಾಗಿ ವೈದ್ಯರು ಅತೀ ಶೀಘ್ರವಾಗಿ ಎರಡೂ ಕಿಡ್ನಿಯನ್ನೂ ಸಹ ಬದಲಾಯಿಸಬೇಕೆಂದು ಸೂಚಿಸಿದ್ದಾರೆ. ಶಸ್ತ್ರ ಚಿಕಿತ್ಸೆಗೆ 7 ಲಕ್ಷಕ್ಕೂ ಅಧಿಕ ಹಣ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು, ಗಣೇಶ ವೆಂಕಟ ಅಂಬಿಗ ಅವರು ತೀರಾ ಬಡಕುಟುಂಬದವರಾಗಿರುವ ಹಿನ್ನೆಲೆಯಲ್ಲಿ ಅಷ್ಟು ದೊಡ್ಡಮೊತ್ತದ ಹಣವನ್ನು ಹೊಂದಿಸಲಾಗದ ಕಾರಣ ಇದೀಗ ದಾನಿಗಳ ನೆರವಿಗಾಗಿ ಸಹಾಯಹಸ್ತ ಚಾಚಿದ್ದಾರೆ.
ಈ ಸಂಬ0ಧ ಸಮಾಜ ಸೇವಕರಾದ ಆರ್.ಕೆ ಅಂಬಿಗ ಅವರು ನಮ್ಮ ವಿಸ್ಮ ಟಿ.ವಿ ಯೊಂದಿಗೆ ಮಾತನಾಡಿ, ಗಣೇಶ ಅಂಬಿಗ ಅವರು ಕಳೆದ 3 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿಯೂ ಸಹ ಇವರು ಚಿಕಿತ್ಸೆ ಪಡೆದಿದ್ದು, ಆದರೆ ಇವರ ಆರೋಗ್ಯ ತೀರಾ ಹದಗೇಡುತ್ತಾ ಬಂದಿದೆ. ಇಷ್ಟು ದಿನ ವಾರಕ್ಕೆ 2 ಬಾರಿ ಡಲಾಲಿಸಸಲ್ ಚಿಕಿತ್ಸೆ ಪಡೆಯುತ್ತಿದ್ದ ಇವರಿಗೆ ಇನ್ನು ಮುಂದೆ ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು.
ವಾರಕ್ಕೆ 3 ಭಾರಿ ನಡೆಸುವ ಡಯಾಲಿಸಿಸ್ ಚಿಕಿತ್ಸೆಯ ನೋವನ್ನು ಸಹಿಸಲು ಸಾಧ್ಯವಿಲ್ಲ ಎಂದು ಗಣೇಶ ಅಂಬಿಗ ಅವರು ವ್ಯದ್ಯರಲ್ಲಿ ಹೇಳಿಕೊಂಡ ಕಾರಣ ಆದಷ್ಟು ಬೇಗನೆ ಶಸ್ತ್ರ ಚಿಕಿತ್ಸೆ ಮಾಡಿ ಕಿಡ್ನಿಯನ್ನು ಬದಲಾಯಿಸಬೇಕೆಂದು ಸೂಚಿಸಿದ್ದಾರೆ. ಆದರೆ ಚಿಕಿತ್ಸೆಗೆ 7 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದ್ದು, ಅಷ್ಟೊಂದು ಹಣವನ್ನು ನೀಡುವ ಶಕ್ತಿ ಗಣೇಶ ಅಂಬಿಗರವರ ಬಳಿಯಿಲ್ಲ. 2 ಪುಟ್ಟ ಮಕ್ಕಳನ್ನು ಹಾಗೂ ಪತ್ನಿಯನ್ನು ಸಾಕುವ ಜಜಾಬ್ದಾರಿ ಗಣೇಶ ಅಂಬಿಗ ಅವರ ಮೇಲಿದೆ. ಆದ ಕಾರಣ ಸಮಸ್ತ ಮಾನವೀಯ ಕೈಗಳು ಗಣೇಶ ಅಂಬಿಗ ಅವರ ಶಸ್ತ್ರ ಚಿಕಿತ್ಸೆಗೆ ಧನಸಹಾಯವನ್ನು ಮಾಡಬೇಕು ಎಂದು ವಿನಂತಿಸಿಕೊ0ಡರು.
ಕಡುಬಡತನದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಗಣೇಶ ಅಂಬಿಗ ಅವರ ಸ್ಥಿತಿಯನ್ನು ಕಂಡು ಕುಟುಂಬದವರು ಅಸಾಹಯಕ ಸ್ಥಿತಿಯಲ್ಲಿ ಕಣ್ಣೀರಿಡುವಂತಾಗಿದೆ. ಈಗಾಗಲೇ ಚಿಕಿತ್ಸೆ, ಪರೀಕ್ಷೆ, ಔಷಧಗಳಿಗಾಗಿ ಸಾಕಷ್ಟು ಖರ್ಚು ಮಾಡಿರುವ ಕುಟುಂಬ ಇವರ ಆಪರೇಷನ್ ಗೆ ತಗುಲುವ ವೆಚ್ಚವನ್ನು ಹೊಂದಿಸಲಾಗದ ಸ್ಥಿತಿ ತಲುಪಿದ್ದಾರೆ. ಹೀಗಾಗಿ ದಾನಿಗಳ ನೆರವನ್ನು ಪಡೆಯುವ ಉದ್ದೇಶದಿಂದ ಸಾರ್ವಜನಿಕರಿಂದ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಕೈಲಾದ ನೆರವು ನೀಡಬೇಕೆಂದು ಕುಟುಂಬಸ್ಥರು ನಮ್ಮ ವಿಸ್ಮಯ ಟಿ.ವಿಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ) ಮೊಬೈಲ್ : 9886460777,, INDIAN FAMOUS ASTROLOGER ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ