ಮನೆಯ ಸುತ್ತ ಇರುವ ಜಾಗದಲ್ಲಿ ಅಡಕೆ ಹಾಗೂ ತೆಂಗಿನ ಸಸಿಗಳನ್ನು ನೆಟ್ಟಿದ್ದಳು. ಆದರೆ, ನೀರಿನ ಸಮಸ್ಯೆಯಿಂದ ಇವು ಒಣಗುತ್ತಿದ್ದವು. ಹೇಗಾದರು ಮಾಡಿ ಈ ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಹಠಕ್ಕೆ ಬಿದ್ದ ಇವರು, ಒಬ್ಬಂಟಿಯಾಗಿ ಬಾವಿ ತೋಡುವ ಕಾರ್ಯ ಆರಂಭಿಸಿದ್ದರು.
ಶಿರಸಿ; ಏಕಾಂಗಿಯಾಗಿ ಬಾವಿ ತೋಡಿ ಸಾಧನೆ ಮಾಡಿದ್ದ ಶಿರಸಿಯ ಸಾಹಸಿ ಮಹಿಳೆ ಗೌರಿ ನಾಯ್ಕರಿಗೆ ಈ ಸಾಲಿನ ರಾಜ್ಯ ಮಟ್ಟದ ವೀರ ಮಹಿಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮನೆಯಲ್ಲಿ ನೀರಿನ ಸಮಸ್ಯೆಯಾದಾಗ ಗೌರಿ, ಛಲಬಿಡದೆ ಏಕಾಂಗಿಯಾಗಿ 8 ಅಡಿ ಅಗಲ, 60 ಅಡಿ ಆಳದ ಬಾವಿ ತೋಡಿದ್ದಳು. ಜಿಲ್ಲೆಯಷ್ಟೆ ಅಲ್ಲ, ರಾಜ್ಯಮಟ್ಟದಲ್ಲೂ ಈಕೆಯ ಸಾಹಸದ ಬಗ್ಗೆ ಚರ್ಚೆಯಾಗಿತ್ತು. ಎಲ್ಲರೂ ಈಕೆಯ ಸಾಹವನ್ನು ಶ್ಲಾಘಿಸಿದ್ದರು. ಇವರ ಸಾಹಸಕ್ಕೆ ಹಲವು ಸಂಘಟನೆಗಳು ಗೌರವಿಸಿದ್ದವು. ಇದೀಗ ರಾಜ್ಯ ಸರ್ಕಾರ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಯಾರು ಈ ಗೌರಿ? ಈಕೆಯ ಸಾಧನೆ ಏನು?: ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿರುವ ಗೌರಿ, ತಮ್ಮ ಮನೆಯ ಸುತ್ತ ಇರುವ ಜಾಗದಲ್ಲಿ ಅಡಕೆ ಹಾಗೂ ತೆಂಗಿನ ಸಸಿಗಳನ್ನು ನೆಟ್ಟಿದ್ದಳು. ಆದರೆ, ನೀರಿನ ಸಮಸ್ಯೆಯಿಂದ ಇವು ಒಣಗುತ್ತಿದ್ದವು. ಹೇಗಾದರು ಮಾಡಿ ಈ ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಹಠಕ್ಕೆ ಬಿದ್ದ ಇವರು, ಒಬ್ಬಂಟಿಯಾಗಿ ಬಾವಿ ತೋಡುವ ಕಾರ್ಯ ಆರಂಭಿಸಿದ್ದರು.
ಸತತ ಎರಡು ತಿಂಗಳ ಶ್ರಮದ ಬಳಿ 60 ಅಡಿ ಆಳದ ಬಾವಿ ತೆಗೆದಿದ್ದು, ಜೀವಜಲ ಕಂಡಾಗ ಇವರ ಕಣ್ಣುಗಳಲ್ಲಿ ಆನಂದಭಾಷ್ಪ ಹರಿದಿತ್ತು. 8 ಅಡಿ ಅಗಲದಲ್ಲಿ ದಿನಕ್ಕೆ ಮೂರು ಅಡಿ ಮಣ್ಣನ್ನು ಬಾವಿಯಿಂದ ತೆಗೆಯಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಾವಿಯನ್ನು ಒಬ್ಬರೇ ತೋಡುವುದು ಸಾಮಾನ್ಯ ಕೆಲಸವಲ್ಲ. ಎಂಟು ಅಡಿ ಅಗಲದ ಬಾವಿಯನ್ನು ತೆಗೆಯಲು ನಾಲ್ಕೈದು ಜನ ಬೇಕಾಗುತ್ತದೆ.
ಮಣ್ಣನ್ನು ತೆಗೆಯಲೇ ಕನಿಷ್ಠ ಅಂದರೂ ಇಬ್ಬರು ಬೇಕಾಗುತ್ತದೆ. ಅಲ್ಲದೆ, ಆಳಕ್ಕೆ ಹೋದಂತೆ ಬಾವಿಯ ಕೆಳಗಡೆ ಉಸಿರಾಡುವುದು ಕಷ್ಟವಾಗುತ್ತದೆ. ಈ ಎಲ್ಲಾ ಅಡೆತಡೆಯನ್ನು ಬಿಟ್ಟು ಗೌರಿ ಏಕಾಂಗಿಯಾಗಿ ಬಾವಿ ತೋಡಿದ್ದಾಳೆ. ನೀರು ಕಾಣಿಸಿಕೊಂಡ ಬಳಿಕ ಬೇರೆಯವರ ಸಹಾಯ ಪಡೆದುಕೊಂಡು ಕೆಲಸ ಪೂರ್ಣಗೊಳಿಸಿದ್ದಾಳೆ. ಈಕೆಯ ಈ ಸಾಹಸಕ್ಕೆ ಈಗ ಗೌರವ ಒಲಿದಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888
ವಿಸ್ಮಯ ನ್ಯೂಸ್, ಶಿರಸಿ