ಸುಮಾರು 100 ಮೀ ಉದ್ದದ ಗುಹೆಯ ಒಳಬಾಗದಲ್ಲಿ ನಿಸರ್ಗ ನಿರ್ಮಿತವಾದ ಅಚ್ಚ ನೆರಳೆಯ ಬಣ್ಣದ ಸುಮಾರು 5 ಅಡಿ ಎತ್ತರದ ಉದ್ಬವ ಶಿವಲಿಂಗಕ್ಕೆ ಪ್ರತಿ ವರ್ಷ ಶಿವರಾತ್ರಿಯಂದು ಸಹಸ್ರಾರು ಭಕ್ತಾದಿಗಳು ಪೂಜಿಸುತ್ತಾರೆ.
ದಾಂಡೇಲಿ: ಕಾಡು ಕಣಿವೆಗಳ ನಡುವೆ ಕಾಳಿ ಕಣಿವೆಯಲ್ಲಿರುವ ಜೊಯಿಡಾ ತಾಲೂಕಿನ ಪ್ರಸಿದ್ಧ ಪ್ರಸಿದ್ದ ಪ್ರವಾಸಿ ಯಾತ್ರಾ ತಾಣವೇ ಕವಳಾ ಗುಹೆ. ಸುಮಾರು 100 ಮೀ ಉದ್ದದ ಗುಹೆಯ ಒಳಬಾಗದಲ್ಲಿ ನಿಸರ್ಗ ನಿರ್ಮಿತವಾದ ಅಚ್ಚ ನೆರಳೆಯ ಬಣ್ಣದ ಸುಮಾರು 5 ಅಡಿ ಎತ್ತರದ ಉದ್ಬವ ಶಿವಲಿಂಗಕ್ಕೆ ಪ್ರತಿ ವರ್ಷ ಶಿವರಾತ್ರಿಯಂದು ಸಹಸ್ರಾರು ಭಕ್ತಾದಿಗಳು ಪೂಜಿಸುತ್ತಾರೆ.
ಕವಳಾ ದೇವರಿಗೆ ಹರಕೆ ಹೋರುವ ಪದ್ಧತಿಯೇ ಬೇರೆಯ ರೀತಿಯದ್ದಾಗಿದ್ದು, ದೇವರಿಗೆ ಇಷ್ಟಾರ್ಥ ಸಿದ್ದಿಗಾಗಿ ಪ್ರತೀ ವರ್ಷ ಕ್ಷೇತ್ರಕ್ಕೆ ಜಾತ್ರಾ ಸಮಯದಲ್ಲಿ ಬಂದು ಹಣ್ಣುಕಾಯಿ ಮಾಡಿಕೊಂಡು ಹೋಗುವುದಾಗಿ ಹರಕೆ ಹೊರುತ್ತಾರೆ. ಧರ್ಮಬೇಧವಿಲ್ಲದೇ ಹಿಂದುಗಳ ಹೊರತಾಗಿ ಅನ್ಯ ಧರ್ಮಿಯರು ಕವಳಾ ಜಾತ್ರೆಗೆ ಬರುವುದು ಸೌಹಾರ್ಧದ ಸಂಕೇತವಾಗಿದೆ.
ಕವಳಾ ಸುತ್ತಲಿನ ಹಳ್ಳಿಗಳ,ಯಲ್ಲಾಪುರ,ಅಂಬಿಕಾ ನಗರ,ಜೊಯಿಡಾ,ಶಿರಸಿ,ದಾಂಡೇಲಿ ಮುಂತಾದ ಕಡೆಗಳಿಂದ ಭಕ್ತರು ಶಿವರಾತ್ರಿಯ ಜಾತ್ರೆಗೆ ಆಗಮಿಸುತ್ತಿದ್ದು, ಒಂದೆ ದಿನ ನಡೆಯುವ ಈ ಜಾತ್ರೆಗೆ ಅನೇಕ ಜಾತ್ರಾ ಅಂಗಡಿಗಳು ತೆರದು ಕೊಳ್ಳುತ್ತವೆ, ಜಾತ್ರೆಯ ಸಂದರ್ಬದಲ್ಲಿ ಕವಳಾ ಗುಹೆಯಲ್ಲಿ ಬೆಳಕಿಗಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಪ್ಲಾಸ್ಟಕ್ ಬಳಕೆಯನ್ನು ಸಂಪೂರ್ಣವಾಗಿ ಇಲ್ಲಿ ನಿಷೇಧಿಸಲಾಗಿದೆ. ಅರಣ್ಯ ಇಲಾಖೆ, ಪರಿಸರ ಅಭಿವೃದ್ಧಿ ಸಮಿತಿಗಳು, ಸ್ವಯಂ ಸೇವಾ ಸಮಿತಿಗಳು, ಜಾತ್ರೆಗೆ ಬರುವ ಬಕ್ತರಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿದೆ.
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.
ವಿಸ್ಮಯ ನ್ಯೂಸ್, ಜೋಯ್ಡಾ