ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೇ ತನ್ನ ಎರಡೂ ಟಿಪ್ಪರ್‌ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಭಟ್ಕಳ: ಯಾವುದೇ ಪ್ರಕರಣ ದಾಖಲಿಸದೇ ಕಾನೂನು ಬಾಹೀರವಾಗಿ ತನ್ನ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಖಾಸಗಿ ದೂರಿನ ಮೇರೆಗೆ ಕೋರ್ಟ್ ಕಮಿಷನ್‌ನಿಂದ ವರದಿ ಪಡೆದ ಭಟ್ಕಳ ಜೆಎಮ್‌ಎಫ್‌ಸಿ ನ್ಯಾಯಾಲಯ, ಭಟ್ಕಳ ಶಹರ ಪೊಲೀಸ್ ಠಾಣಾ ಆವರಣ ಶೋಧನೆಗೆ ಆದೇಶ ನೀಡಿದೆ. ಈ ಸಂಬಂಧ ಕುಂದಾಪುರದ ನ್ಯಾಯವಾದಿ ಎನ್.ಎಸ್.ಆರ್. ಭಟ್, ಸುದ್ದಿಗಾರರಿಗೆ ಮಾಹಿತಿ ನೀಡಿದರು.
ತಾಲೂಕಿನ ನವಾಯತ ಕಾಲೋನಿಯ ಮಹ್ಮದ್ ಶಾಬಂದ್ರಿ ಎಂಬುವವರು, ಕಳೆದ ಜ.7ರಂದು ಭಟ್ಕಳ ತಾಲೂಕಿನ ಸಿದ್ದೀಕ್ ಸ್ಟ್ರೀಟ್‌ನಲ್ಲಿ ಟಿಪ್ಪರ್ ವಾಹನಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು, ಯಾವುದೇ ಕಾರಣ ನೀಡದೇ ತನ್ನ ಎರಡೂ ಟಿಪ್ಪರ್‌ಗಳನ್ನು ವಶಕ್ಕೆ ಪಡೆದುಕೊಂಡು ಭಟ್ಕಳ ಶಹರ ಠಾಣೆಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಟಿಪ್ಪರ್‌ಗಳನ್ನು ತಮ್ಮ ಬಳಿಯೇ ಅಕ್ರಮವಾಗಿ ಇಟ್ಟುಕೊಂಡಿದ್ದು, ಇಲ್ಲಿಯವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ತನಗೆ ಆಗಿರುವ ನಷ್ಟವನ್ನೂ ಭರಿಸಿಕೊಡಬೇಕು ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಈ ಕುರಿತು ವರದಿ ನೀಡುವಂತೆ ಕೋರ್ಟ್ ಕಮಿಷನ್‌ನನ್ನು ನೇಮಿಸಿತ್ತು. ನಂತರ ಕಮಿಷನ್‌ನ ವಕೀಲರು ನೀಡಿದ ವರದಿಯನ್ನು ಪರಿಗಣಿಸಿ ಪೊಲೀಸ್ ಠಾಣಾ ಆವರಣ ಸರ್ಚ್ಗೆ ಆದೇಶ ನೀಡಿದ್ದು, ಎರಡೂ ಟಿಪ್ಪರ್‌ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತಿಳಿಸಿದೆ ಎಂದು ವಿವರಿಸಿದರು.
ಅಕ್ರಮವಾಗಿ, ಅನಧಿಕೃವಾಗಿ ಲಾರಿಯನ್ನು ಇಟ್ಟುಕೊಳ್ಳಲಾಗಿದೆ. ಯಾವುದೇ ಕೇಸ್ ಕೂಡಾ ದಾಖಲಾಗಿಲ್ಲ. ಇದರಿಂದಾಗಿ ಕಳೆದ ಎರಡುವರೆ ತಿಂಗಳಿನಿಂದ ಲಾರಿ ಮಾಲೀಕರು ಪರಿತಪಿಸುವಂತಾಗಿದೆ. ಮಾನಸಿಕ ನೋವು ಅನುಭವಿಸಿದ್ದಾರೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ವಕೀಲದಾ ಎನ್.ಎಸ್.ಆರ್. ಭಟ್ ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ