ಕಡಿಮೆ ದರದಲ್ಲಿ ವಸ್ತುಗಳನ್ನು ಕೊಡುವುದಾಗಿ ನಂಬಿಸಿ ನೂರಾರು ಗ್ರಾಹಕರಿಗೆ ಮೋಸ ಮಾಡಿದ್ದ ಆರೋಪಿ ಅಂದರ್: ಮುಂಗಡ ಹಣಕೊಟ್ಟು ಮೋಸಹೋಗಿದ್ದ ಜನರು

ಮುಂಗಡವಾಗಿ ಹಣ ನೀಡಿದವರಿಗೆ ಮೂಲ ಬೆಲೆಯ ಅರ್ಧದಷ್ಟು ಕಡಿಮೆ ದರದಲ್ಲಿ ಗೃಹಬಳಕೆ ವಸ್ತುಗಳನ್ನು ನೀಡೋದಾಗಿ ಭಾರೀ ಪ್ರಚಾರವನ್ನು ಸಹ ಮಾಡಿತ್ತು. ಇದನ್ನ ನಂಬಿದ ಗ್ರಾಹಕರು ತಾ ಮುಂದು…ನಾಮುoದು… ಎಂದು ಮುಗಿ ಬಿದ್ದಿದ್ದರು. ಅದರಲ್ಲಿ ಮೊದಲು ಬರುವ 25 ಗ್ರಾಹಕರಿಗೆ ಶೇಕಡಾ 45 ರಷ್ಟು ರಿಯಾಯಿತಿ ಎಂದು ತಿಳಿಸಲಾಗಿತ್ತು

ಕಾರವಾರ: ನಗರದ ಜನನಿಬಿಡ ಜಾಗದಲ್ಲಿ ಮಹಿಗೆ ಹಾಕಿದ್ದ ಆ ವ್ಯಾಪಾರಿಗಳು ಬಣ್ಣದ ಮಾತುಗಳಿಂದ ಗ್ರಾಹಕರನ್ನು ಮರಳು ಮಾಡಿದ್ದರು. ಕೆಲವೇ ದಿನಗಳ ಅಂತರದಲ್ಲಿ ಸುತ್ತಮುತ್ತಲ ಗ್ರಾಹಕರ ವಿಶ್ವಾಸಗಳಿಸಿ ಕಂಪನಿಯಿoದ ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿದ್ದರು. ಇವರ ಮಾತಿಗೆ ಮರುಳಾದ ಜನ ಲಕ್ಷಾಂತರ ರೂಪಾಯಿ ಹೂಡಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸುವ ಖುಷಿಯಲ್ಲಿದ್ದರು. ಆದರೆ ಅವರೆಲ್ಲರೂ ರಾತ್ರೋರಾತ್ರಿ ನಾಪತ್ತೆಯಾಗಿ, ಹಣ ಹೂಡಿದವರಿಗೆ ಪಂಗನಾಮ ಹಾಕಿದ್ದು, ತಾಲೂಕಿನಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದೀಗ ವಂಚನೆಯ ರೂವಾರಿ, ಖತರ್ನಾಕ್ ಆಸಾಮಿಯನ್ನು ಬಂಧಿಸುವಲ್ಲಿ ಪೊಲೀಸರು ಈಗ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ನಗರದ ಕಾಜುಭಾಗ ರಸ್ತೆ ಪಕ್ಕದಲ್ಲಿರುವ ಸುಮನಲಕ್ಷ್ಮೀ ಎನಕ್ಲೇವ್ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ಅಮೋಗಾ ಟ್ರೆಡರ್ಸ್ ಹೆಸರಲ್ಲಿ ಕಂಪನಿಯೊoದು ತಿಂಗಳ ಹಿಂದೆ ಆರಂಭವಾಗಿತ್ತು. ಮುಂಗಡವಾಗಿ ಹಣ ನೀಡಿದವರಿಗೆ ಮೂಲ ಬೆಲೆಯ ಅರ್ಧದಷ್ಟು ಕಡಿಮೆ ದರದಲ್ಲಿ ಗೃಹಬಳಕೆ ವಸ್ತುಗಳನ್ನು ನೀಡೋದಾಗಿ ಭಾರೀ ಪ್ರಚಾರವನ್ನು ಸಹ ಮಾಡಿತ್ತು. ಇದನ್ನ ನಂಬಿದ ಗ್ರಾಹಕರು ತಾ ಮುಂದು…ನಾಮುoದು… ಎಂದು ಮುಗಿ ಬಿದ್ದಿದ್ದರು. ಅದರಲ್ಲಿ ಮೊದಲು ಬರುವ 25 ಗ್ರಾಹಕರಿಗೆ ಶೇಕಡಾ 45 ರಷ್ಟು ರಿಯಾಯಿತಿ ಎಂದು ತಿಳಿಸಲಾಗಿತ್ತು.

ಇನ್ನು ಕಂಪನಿಯಲ್ಲಿ ಪೂಜಾ ದೀಪಕ್ಕೆ 101 ರೂಪಾಯಿ, ಮೂರು ಡೋರಿನ ಕಟ್ಟಿಗೆ ಮತ್ತು ಸ್ಟೀಲ್ ಆಲ್ಮೇರಾಗೆ 6 ಸಾವಿರ ರೂಪಾಯಿ, ಕಟ್ಟಿಗೆ ಸೋಪಾ ಸೆಟ್ ಗೆ 10 ಸಾವಿರ ರೂಪಾಯಿ, ಸ್ಟೀಲ್ ಬೆಡ್ 5500ರೂಪಾಯಿ, ವಾಷಿಂಗ ಮಶೀನ್ 8500ರೂಪಾಯಿ, ಪ್ರೀಜ್ 800 ರೂಪಾಯಿ ಹೀಗೆ ಗೃಹಬಳಕೆ ವಸ್ತುಗಳ ಬೆಲೆ ನಿಗದಿಪಡಿಸಲಾಗಿತ್ತು. ಮೊದ ಮೊದಲು ಹೇಳಿದಂತೆಯೇ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದರು.

ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತ ಅರ್ಧದಷ್ಟು ಕಡಿಮೆ ಇದ್ದಿದರಿಂದ ಗ್ರಾಹಕರು ಕೂಡ ವಸ್ತುಗಳನ್ನು ಖರೀದಿಸಲು ಹಣ ಕೊಟ್ಟು ಬುಕ್ ಮಾಡಿಕೊಂಡಿದ್ದರು. ಮಾತ್ರವಲ್ಲ ಮದುವೆಗೆಂದು ಕೆಲವರು ಲಕ್ಷಾಂತರ ರೂಪಾಯಿ ಮುಂಗಡ ಕಟ್ಟಿ ವಸ್ತುಗಳ ಖರೀದಿಸಲು ಮುಂದಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ತಾವು ಮೋಸ ಹೋಗಿದ್ದು ಗೊತ್ತಾಗಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ಹೌದು, ಮೋಸಹೋದ ಗ್ರಾಹಕರಿಂದ ದೂರು ದಾಖಲಿಸಿಕೊಂಡ ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ .ಕಾರವಾರ ನಗರ ಠಾಣೆಯಲ್ಲಿ ಅಂಗಡಿ ಮಾಲೀಕರಾದ ತಮಿಳುನಾಡು ಮೂಲದ ಶಿವರಾಜ್ ಮತ್ತು ಆತನ ಜೊತೆಯಲ್ಲಿದ್ದ ಗೋವಿಂದರಾಜು, ನಾಸಿರ್ ಎನ್ನುವವರ ಮೇಲೆ ಕೇಸ್ ದಾಖಲಾಗಿತ್ತು.

ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಕಾರವಾರದಿಂದ ಪರಾರಿಯಾಗಿದ್ದ. ಈ ವೇಳೆ ಕೂಡಲೇ ತಮಿಳುನಾಡು ಪೊಲೀಸರನ್ನು ಸಂಪರ್ಕಿಸಿ, ಮಾಹಿತಿ ನೀಡಿ, ಕಾರವಾರದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ ಎನ್ನಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್,. ಕಾರವಾರ

Exit mobile version