Join Our

WhatsApp Group
Info
Trending

ಉತ್ತರಕನ್ನಡದ ಇಂದಿನ‌ ಕೋವಿಡ್ ವಿವರ ಇಲ್ಲಿದೆ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 49 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೆಲ್ತ ಬುಲೆಟಿನ್ ಪ್ರಕಾರ ಕುಮಟಾದಲ್ಲಿ ಒಂದು ಸಾವು ಸಂಭವಿಸಿದೆ.

ಕುಮಟಾದಲ್ಲಿ 16, ಹೊನ್ನಾವರ 6, ಭಟ್ಕಳದಲ್ಲಿ 2, ಶಿರಸಿಯಲ್ಲಿ 3, ಕಾರವಾರದಲ್ಲಿ 11, ಅಂಕೋಲಾದಲ್ಲಿ 3, ಯಲ್ಲಾಪುರದಲ್ಲಿ 5, ಮುಂಡಗೋಡ 2, ಹಳಿಯಾಳದಲ್ಲಿ 1, ಕೇಸ್ ಕಾಣಿಸಿಕೊಂಡಿದೆ.

ಇದೇ ವೇಳೆ‌ ಜಿಲ್ಲೆಯಲ್ಲಿ ಇಂದು 50 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೊನ್ನಾವರ 5, ಭಟ್ಕಳ 3, ಶಿರಸಿ 12, ಸಿದ್ದಾಪುರ 3,ಕಾರವಾರ 8, ಅಂಕೋಲಾ‌ 4, ಕುಮಟಾ 10, ಯಲ್ಲಾಪುರ 5 ಮಂದಿ ಗುಣಮುಖರಾಗಿದ್ದಾರೆ.

ಅಂಕೋಲಾದಲ್ಲಿ 2 ಹೊಸ ಕೊವಿಡ್ ಕೇಸ್ | ಇಂದು 338 ಡೋಸ್ ಲಸಿಕೆ ನೀಡಿಕೆ| ಜುಲೈ 17ರಂದು ವ್ಯಾಕ್ಸಿನೇಶನ್ ಇಲ್ಲ.  
                                                                                     ಅಂಕೋಲಾ ಜುಲೈ 16: ತಾಲೂಕಿನಲ್ಲಿ  ಗುರುವಾರ 2 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಅರ್ಧಶತಕದ ಗಡಿ (50) ತಲುಪಿದೆ.    

ಒಟ್ಟೂ  9 ಸೊಂಕಿತರು ತಾಲೂಕ ಆಸ್ಪತ್ರೆ ಸೇರಿದಂತೆ  ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 41 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ಈ ವರೆಗೆ ತಾಲೂಕಿನಲ್ಲಿ 63 ಕೊವಿಡ್ ಸಾವಿನ ಪ್ರಕರಣ ದಾಖಲಾಗಿದೆ .ಜುಲೈ 16ರ ಶುಕ್ರವಾರ,ತಾಲೂಕಿನ ಗ್ರಾಮೀಣ ವ್ಯಾಪ್ತಿಯ ರಾಮನಗುಳಿ ಪ್ರಾ. ಆ ಕೇಂದ್ರ (59), ಪ್ರಾ. ಆ. ಕೇಂದ್ರ ಹಾರವಾಡ (58), ಪ್ರಾ. ಆ ಕೇಂದ್ರ ಹಿಲ್ಲೂರ (113), ಬೆಳೆಸೆ ಪಿ.ಎಚ್.ಸಿ ವ್ಯಾಪ್ತಿಯ ಉಪ ಕೇಂದ್ರ ಬೆಳಂಬಾರದಲ್ಲಿ (108) ಸೇರಿ ಒಟ್ಟೂ 338 ಲಸಿಕೆ ನೀಡಲಾಗಿದೆ.                      

ಜುಲೈ 17 (ಶನಿವಾರ) ಲಸಿಕೆ ಪೂರೈಕೆ ವ್ಯತ್ಯಯದಿಂದ ತಾಲೂಕಿನಲ್ಲಿ ಎಲ್ಲಿಯೂ ವ್ಯಾಕ್ಸಿನೇಶನ್  ನಡೆಸಲಾಗುತ್ತಿಲ್ಲ. ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.                             

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್ ಕಾರವಾರ

Check Also
Close
Back to top button