Big NewsImportant
Trending

Deer Skin Seized | ಜಿಂಕೆ ಸಾಯಿಸಿ ಊಟ ತಯಾರಿಸುತ್ತಿದ್ದಾಗಲೇ ಬೇಟೆಗಾರನ ಬಂಧನ| ತಲೆಮರೆಸಿ ಕೊಂಡ ಇನ್ನೋರ್ವ ಆರೋಪಿತನ ಪತ್ತೆಗೆ ಬಲೆ ಬೀಸಿದ ಇಲಾಖೆ

ಕೃತ್ಯಕ್ಕೆ ಬಳಸಿದ ನಾಡ ಬಂದೂಕು, ಜಿಂಕೆ ಚರ್ಮ, ಬ್ಯಾಟರಿ - ಕತ್ತಿ ವಶ

ಅಂಕೋಲಾ: ಜಿಂಕೆಯನ್ನು ಬೇಟೆಯಾಡಿ, ಪಾತ್ರೆಯಲ್ಲಿ ಮಾಂಸ ಬೇಯಿಸಿಟ್ಟ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅರಣ್ಯಾಧಿಕಾರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ನಾಡ ಬಂದೂಕನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ತಾಲೂಕಿನ ಮಾಸ್ತಿಕಟ್ಟ ಅರಣ್ಯ ವಲಯ ವ್ಯಾಪ್ತಿಯ ಹೆಬ್ಬುಳದಲ್ಲಿ ನಡೆದಿದೆ.

ಯುವತಿಯನ್ನು ಗರ್ಭವತಿ ಮಾಡಿ ಬೆದರಿಕೆ ಹಾಕಿದ ಭೂಪ: ಹೊಟೇಲ್ ರೂಂ ಮತ್ತು ಗಿಡಗಂಟಿಗಳ ಪೊದೆಯಲ್ಲೂ ಸಂಪರ್ಕ: ಯುವತಿ ಕೊಟ್ಟ ದೂರಿನಲ್ಲಿ ಏನಿದೆ ನೋಡಿ?

ಹೆಬ್ಬುಳ ನಿವಾಸಿ ರೋಶನ್ ಉಲ್ಲಾಸ್ ನಾಯ್ಕ(35 ) ಬಂಧಿತ ಆರೋಪಿತನಾಗಿದ್ದು ಈತನನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಆರೋಪಿತನು ಹೆಬ್ಬುಳ ಅರಣ್ಯ ಸ.ನಂ 72 ರ ಪ್ರದೇಶದಲ್ಲಿ ನಾಡ ಬಂದೂಕಿನಿಂದ ಜಿಂಕೆ (Spot Deer ) ಬೇಟೆಯಾಡಿ ಸಾಯಿಸಿ ಅದರ ಮಾಂಸವನ್ನು ತೆಗೆದುಕೊಂಡು ಮನೆಗೆ ತಂದು ಪಾತ್ರೆಯಲ್ಲಿ ಬೇಯಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದ್ದು , ದಾಳಿಯ ಕಾಲಕ್ಕೆ ಪಾತ್ರೆಯಲ್ಲಿ ಬೇಯಿಸುತ್ತಿದ್ದ ಜಿಂಕೆ ಮಾಂಸ, ಸ್ಥಳದಲ್ಲಿ ಇದ್ದ ಜಿಂಕೆ ಚರ್ಮ, ಪಾದಗಳು, ಕೃತ್ಯಕ್ಕೆ ಬಳಸಿದ ಕತ್ತಿ, ಬ್ಯಾಟರಿಗಳೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತರೆಮರೆಸಿ ಕೊಂಡ ಇನ್ನೋರ್ವ ಆರೋಪಿ ಅಮಿತ ಕಮಲಾಕರ ತಳೇಕರ ಈತನ ಪತ್ತೆಗೆ ಬಲೆ ಬೀಸಿದ್ದಾರೆ.

ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ ಕೆ.ಸಿ, ಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಇವರ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ.ಪಿ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಉಪವಲಯ ಅರಣ್ಯಾಧಿಕಾರಿಗಳಾದ ಅರುಣ ನಡಕಟ್ಟಿನ, ಮಲ್ಲಿಕಾರ್ಜುನ ಅಂಗಡಿ, ನವೀನ ಪಾಟೀಲ್, ಅರಣ್ಯ ರಕ್ಷಕರಾದ ಚೆನ್ನಪ್ಪ ಲಮಾಣಿ, ವೆಂಕಟೇಶ ಚೆನ್ನಯ್ಯ, ರುದ್ರಗೌಡ ಪಾಟೀಲ್, ಅಬಲೆಪ್ಪ ದರೆಣ್ಣೆವರ, ಪ್ರಶಾಂತ ತಳವಾರ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿತರ ರಕ್ಷಣೆಗಾಗಿ ಇಲ್ಲವೇ ಪ್ರಕರಣ ಸಡಿಲಿಕೆಗೆ ಕೆಲವರು ಅರಣ್ಯಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಒತ್ತಡ ಹೇರುವ ಯತ್ನ ನಡೆಸಿದ್ದರು ಎನ್ನಲಾಗಿದ್ದು, ಅವರಿಗೆ ಸೊಪ್ಪು ಹಾಕದ ಅಧಿಕಾರಿಗಳು ಕೇಸ್ ದಾಖಲಿಸಿ, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಎಂದು ಪ್ರಜ್ಞಾವಂತ ವಲಯದಿಂದ ಇಲಾಖಾ ಕಾರ್ಯ ವೈಖರಿಗೆ ಮೆಚ್ಚುಗೆ ಮಾತು ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button