ಕಾರವಾರದ ಮಣ್ಣಿನ ಮಗ ಈಗ ಭಾರತೀಯ ತಟರಕ್ಷಕ ಪಡೆಯ ಕಮಾಂಡರ್: ಕರ್ನಾಟಕ, ಗೋವಾ, ಕೇರಳ, ಲಕ್ಷದ್ವೀಪವನ್ನೊಳಗೊಂಡ ಪಶ್ಚಿಮ ವಲಯದ ಉನ್ನತ ಹುದ್ದೆ ಜವಾಬ್ದಾರಿ
ಅಂಕೋಲಾ: ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ಭಾರತೀಯ ಕೋಸ್ಟ್ ಗಾರ್ಡ್ ನ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ಜಿಲ್ಲೆಯ ಕಾರವಾರದ ಮನೋಜ ವಸಂತ ಬಾಡಕರ ಅವರು ಆಯ್ಕೆಯಾಗಿದ್ದಾರೆ.ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮನೋಜ ಅವರು ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದರು.
ಉಡವನ್ನು ನುಂಗಲು ಪ್ರಯತ್ನಿಸಿದ ಬೃಹತ್ ಗಾತ್ರದ ಕಾಳಿಂಗ ಸರ್ಪ: ಹೇಗಿತ್ತು ನೋಡಿ ಒಂದುವರೆ ಗಂಟೆಯ ಕಾದಾಟ!
ಕಾರವಾರದ ಸೆಂಟ್ ಜೋಸೆಫ್ ಶಾಲೆ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಮನೋಜ ಅವರು 2006 ರಿಂದ 2008 ಕರ್ನಾಟಕದ ಭಾರತೀಯ ಕೋಸ್ಟ್ ಗಾರ್ಡ್ ಮುಖ್ಯಸ್ಥರಾಗಿ 2013 ರಿಂದ 2018 ರ ವರೆಗೆ ಗೋವಾ ಕೋಸ್ಟ್ ಗಾರ್ಡ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2018 ರಲ್ಲಿ ಐ.ಜಿ ಯಾಗಿ ಪದೋನ್ನತಿ ಹೊಂದಿದ್ದರು.
ಇದೀಗ ಭಾರತೀಯ ಕೋಸ್ಟ್ ಗಾರ್ಡ್ ಕಮಾಂಡರ್ ಆಗಿ ನೇಮಕ ಆಗಿರುವ ಮನೋಜ ಅವರು ಪಶ್ಚಿಮ ವಲಯ ವ್ಯಾಪ್ತಿಯ ಕರ್ನಾಟಕ, ಮಹಾರಾಷ್ಟ್ರ,ಗೋವಾ, ಕೇರಳ ಮತ್ತು ಲಕ್ಷದ್ವೀಪಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಜಿಲ್ಲೆಯ ಅದರಲ್ಲಿಯೂ ಮುಖ್ಯವಾಗಿ ಕಾರವಾರದ ಮಣ್ಣಿನ ಮಗ ಅತ್ಯುನ್ನತ ಹುದ್ದೆ ಅಲಂಕರಿಸಿರುವುದಕ್ಕೆ ವಿವಿಧ ಸ್ಥರದ ಗಣ್ಣರು, ದೇಶಾಭಿಮಾನಿಗಳು ಸಂತಸ ವ್ಯಕ್ತ ಪಡಿಸಿ, ಬಾಡಕರ ಕಾಲಾವಧಿಯಲ್ಲಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿ ಎಂದು ಶುಭ ಹಾರೈಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ