ಬಿಜೆಪಿ ಕಾರ್ಯಕರ್ತರಿಂದಲೇ ಶಾಸಕರಿಗೆ ಕಪ್ಪು ಬಾವುಟ ಪ್ರದರ್ಶನ: ಮಾತಿನ ಚಕಮಕಿ : ಶಾಸಕ ಸುನೀಲ್ ನಾಯ್ಕ ಹೇಳಿದ್ದೇನು?
ಹೊನ್ನಾವರ: ಪಕ್ಷದ ಕಾರ್ಯಕರ್ತರೆ ಬಿಜೆಪಿ ಶಾಸಕ ಸುನೀಲ್ ನಾಯ್ಕ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ತೋರಿಸಿ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ. ಹೌದು, ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹೊನ್ನಾವರ ಕೋಟೆಬೈಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಯದಲ್ಲಿ ಅವರದೆ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ.
ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಹಣ ದರೋಡೆ: ಆರೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
ತಮ್ಮ ಗ್ರಾಮದ ರಸ್ತೆ ಕೆಲಸ ಆಗಿಲ್ಲ, ಹಣ ಮಂಜೂರಿ ಮಾಡಿಲ್ಲ ಎಂದು ಶಾಸಕರ ಕಾಯಕ್ರಮದಲ್ಲಿ ಇರುವಾಗ ಪಕ್ಕದ ಮುಟ್ಟಾ ಗ್ರಾಮದ ಐದಾರು ಜನರು ಕಪ್ಪು ಬಾವುಟ ಹಿಡಿದು ಸಭಾಂಗಣದ ಸನಿಹದಲ್ಲೆ ನಿಂತಿದ್ದರು. ಬಾವುಟ ಎತ್ತಿ ಶಾಸಕರಿಗೆ ತೋರಿಸುತ್ತಲೆ ಇದ್ದರು. ಸುಮಾರು ಹತ್ತು ನಿಮಿಷವಾದರೂ ಬಾವುಟ ಹಿಡಿದೆ ನಿಂತಿರುವುದು ನೋಡಿ ಸೇರಿರುವ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಸಲಾಯಿಸಿದ ಘಟನೆ ನಡೆದಿದೆ ಎನ್ನಲಾಗಿದೆ. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನೆ ನಿರತರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅವರು ಬಾವುಟ ಹಿಡಿದು ಬರುವ ಬದಲು ನನ್ನ ಹತ್ತಿರ ಒಂದು ಮಾತು ಆಡಿದರು, ಅವರ ಕೆಲಸ ಇಂದೆ ಪ್ರಾರಂಭ ಮಾಡುತ್ತಿದೆ. ಅವರು ಕೂಡ ನಮ್ಮವರೇ, ನಮ್ಮ ಪಕ್ಷದ ಕಾರ್ಯಕರ್ತರಾಗಿ ಯಾಕೆ ಈ ರೀತಿ ಮಾಡಿದರೂ ಗೊತ್ತಿಲ್ಲ. ಆ ಭಾಗದ ಎರಡು ರಸ್ತೆಗೆ ಈಗಾಗಲೇ ಹಣ ಹಾಕಲಾಗಿದೆ. 40 ಲಕ್ಷ ವೆಚ್ಚದಲ್ಲಿ ರಸ್ತೆ ನಿಮಾಣವಾಗಲಿದ್ದು, ಈ ವಾರವೇ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ಕಾರ್ಯಕರ್ತರಿಂದ ಏನಾದರೂ ತೊಂದರೆ ಆದರೆ ಅವರ ಪರವಾಗಿ ಬಹಿರಂಗ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಸುನೀಲ್ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ