ವಿಭೂತಿ ಪಾಲ್ಸ್ ಗೆ ಬಂದ ಪ್ರವಾಸಿಗ ನೀರು ಪಾಲು| ಹೊಸ ವರ್ಷಾಚರಣೆಗೂ ಮುನ್ನ ಶೋಕ ಸಾಗರ
ಅಂಕೋಲಾ: ವಿಭೂತಿ ಫಾಲ್ಸ್ ಗೆಂದು ಬಂದಿದ್ದ ಪ್ರವಾಸಿಗನೋರ್ವ ನೀರು ಪಾಲಾದ ಘಟನೆ ಅಂಕೋಲಾದಲ್ಲಿ ನಡೆದಿದೆ.ಆಂಧ್ರ- ಹೈದರಾಬಾದ್ (ವಿಶಾಖ ಪಟ್ಟನಂ) ಮೂಲದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಸುಮಾರು 10 ಮಂದಿ ಜೊತೆಯಾಗಿ ಬಂದು ಟ್ರೇನ್ ನಲ್ಲಿ ಇಳಿದು, ಖಾಸಗಿ ಟೂರಿಸ್ಟ್ ಬಾಡಿಗೆ ವಾಹನ ದ ಮೂಲಕ ವಿಭೂತಿ ಫಾಲ್ಸ್,ಗೋಕರ್ಣ ,ಮುರುಡೇಶ್ವರ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದು, ದಾರಿ ಮಧ್ಯೆ ಮೊದಲು ವಿಭೂತಿ ಪಾಲ್ಸ್ ಗೆ ತೆರಳಿದ್ದರು ಎನ್ನಲಾಗಿದೆ.
ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ: ಸುಮಾರು 1 ಕೋಟಿ ಮೌಲ್ಯದ ಗೋವಾ ಮದ್ಯ ವಶಕ್ಕೆ
ಬೆಳೆಗ್ಗೆ ಬಂದವರು ವಿಭೂತಿ ಫಾಲ್ಸ್ ಸೊಬಗು ಸವಿಯುತ್ತ ಪ್ರವಾಸದ ಖುಷಿ ಅನುಭವಿಸುತ್ತಿರುವ ನಡುವೆಯೇ ಆಕಸ್ಮಿಕವಾಗಿ ಓರ್ವ ಯುವಕ ಆಯತಪ್ಪಿ ನೀರುಪಾಲಾದ ಎನ್ನಲಾಗಿದೆ. ಶ್ಯಾಮ ಕನಕಲ್ (23 ) ನೀರು ಪಾಲಾಗಿ ನಂತರ ಶವವಾಗಿ ಪತ್ತೆಯಾದ ದುರ್ದೈವಿ ಎನ್ನಲಾಗಿದೆ. ತಮ್ಮವ ನೀರಿನಲ್ಲಿ ಕಣ್ಮರೆಯಾದ ಆತಂಕದ ನಡುವೆಯೂ ಆತನ ಜೊತೆಗಿದ್ದವರು ಮತ್ತಿತರ ಪ್ರವಾಸಿಗರು. ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿ ಆತನನ್ನು ಕೆಲ ಕ್ಷಣಗಳಲ್ಲಿ ನೀರಿನಿಂದ ಮೇಲೆತ್ತಿದರು ಎನ್ನಲಾಗಿದೆ.
ಆದರೂ ದುರ್ದೈವವಶಾತ್ ಶಾಮ್ ಬದುಕುಳಿಯದೇ ಕೊನೆಯುಸಿರೆಳೆದ ಎನ್ನಲಾಗಿದೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದ್ದು, ಪೋಲೀಸ್ ಪಕರಣ ದಾಖಲಾದ ಬಳಿಕ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಆಸ್ಪತ್ರೆ ಬಳಿ ಮೃತನ ಗೆಳೆಯರು, ಸಹೋದ್ಯೋಗಿಗಳು ರೋಧಿಸುತ್ತಿರುವ ದೃಶ್ಯ ಕಂಡು ಬಂದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇದ್ದವರು ಶೋಕ ಸಾಗರದಲ್ಲಿ ಮುಳುಗೇಳುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ