8 ಗುಣಮುಖ : 28 ಸಕ್ರೀಯ
ದಿನವೊಂದರಲ್ಲೇ 256 ಗಂಟಲುದ್ರವ ಪರೀಕ್ಷೆ
ಅಂಕೋಲಾ : ಮಂಗಳವಾರ ಪುರಸಭೆ ವ್ಯಾಪ್ತಿಯ ಅಂಬಾರಕೊಡ್ಲ ಮತ್ತು ಮುಲ್ಲಾವಾಡಗಳಲ್ಲಿ ತಲಾ ಒಂದೊಂದು ಕರೊನಾ ಸೋಂಕಿನ ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಹಿಂದಿನ ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ.
ಈ ಮೂಲಕ ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ 133ಕ್ಕೆ ಏರಿಕೆಯಾದಂತಿದ್ದರೂ, ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟು ಗುಣಮುಖರಾದ 8 ಜನರ ಬಿಡುಗಡೆಯೊಂದಿಗೆ ಸಕ್ರೀಯ ಸೋಂಕಿತರ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಎನ್ನಲಾಗಿದೆ. ಈ ಕುರಿತು ಹೆಲ್ತ ಬುಲೆಟಿನನಲ್ಲಿ ಧೃಡಗೊಳ್ಳಬೇಕಿದೆ.
ದಾಖಲೆಯ ಗಂಟಲು ದ್ರವ ಪರೀಕ್ಷೆ : ತಾಲೂಕಾಸ್ಪತ್ರೆ ಮತ್ತು ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ 256 ಜನರ ಗಂಟಲುದ್ರವ ಸಂಗ್ರಹಿಸುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಅವಿರತ ಸೇವೆ ಮುಂದುವರೆಸಿದ್ದಾರೆ. ದಿನವೊಂದರಲ್ಲೇ ಈವರೆಗಿನ ಗರಿಷ್ಠ ಸಂಖ್ಯೆಯ ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದ್ದು, ಆಂಟಿಜನ್ ಕಿಟ್ ಮೂಲಕ ಅಂಕೋಲಾದಲ್ಲಯೇ 213 ಗಂಟಲುದ್ರವ ಪರೀಕ್ಷೆ ನಡೆಸಲಾಗಿದ್ದು ಅವುಗಳಲ್ಲಿ 2 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 43 ಗಂಟಲುದ್ರವ ಮಾದರಿಗಳನ್ನು ಈ ಹಿಂದಿನಂತೆಯೇ ಕಾರವಾರದ ಕ್ರಿಮ್ಸ್ ಪ್ರಯೋಗಾಲಯಕ್ಕೆ(ಆರ್.ಟಿ.ಪಿ.ಸಿ.ಆರ್) ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ರ್ಯಾಪಿಡ್ ಟೆಸ್ಟ್ : ಪಟ್ಟಣ ವ್ಯಾಪ್ತಿಯ ಅಂಬಾರಕೊಡ್ಲ ಮತ್ತು ಮುಲ್ಲಾವಾಡ ಸೇರಿದಂತೆ, ಗ್ರಾಮೀಣ ಪ್ರದೇಶಗಳಾದ ಹಿಚ್ಕಡ, ಅವರ್ಸಾ, ಅಗಸೂರ, ಉಳುವರೆ, ಬಳಲೆ ಮತ್ತು ಕೃಷ್ಣಾಪುರಗಳಲ್ಲಿಯೂ ಕೆಲವರ ಗಂಟಲುದ್ರವ ಸಂಗ್ರಹಿಸಿ, ರ್ಯಾಪಿಡ್ ಟೆಸ್ಟ್ ಮಾದರಿಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ