ಅಂಕೋಲಾ: ತಾಲೂಕಿನ ಗ್ರಾಮೀಣ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯೊಬ್ಬರು (Anganwadi Worker) ಅನಾರೋಗ್ಯದಿಂದ ಮೃತಪಟ್ಟ ಘಟನೆ ತಾಲೂಕಿನ ಹೊನ್ನೇಬೈಲ ಗ್ರಾಮದಲ್ಲಿ ನಡೆದಿದೆ. ಹೊನ್ನೇಬೈಲ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋಹಿನಿ ದೇವು ಗೌಡ (43) ಮೃತ ದುರ್ದೈವಿಯಾಗಿದ್ದು ಮೂತ್ರ ಪಿಂಡ ಗಳ(ಕಿಡ್ನಿ) ವೈಪಲ್ಯತೆಯಿಂದ ಬಳಲುತ್ತಿದ್ದ ಈಕೆ ಕಳೆದ ಮೂರು ತಿಂಗಳುಗಳಿಂದ ರಜೆ ಪಡೆದು ಡಯಾಲಿಸಿಸ್ ಮತ್ತಿತರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ರವಿವಾರ ರಾತ್ರಿ ಆರೋಗ್ಯ ಸ್ಥಿತಿಯಲ್ಲಿ ಗಂಭೀರ ಏರುಪೇರಾಗಿ ಆಸ್ಪತ್ರೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಕೊನೆ ಉಸಿರೆಳೆದರು ಎನ್ನಲಾಗಿದೆ.
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸವಿತಾ ಶಾಸ್ತ್ರಿಮಠ, ಮೇಲ್ವಿಚಾರಕಿ ಸುಲೋಚನಾ ನಾಯ್ಕ, ಬೆಳಂಬಾರ ವಲಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತಿತರರು ಸೋಮವಾರ ಬೆಳಿಗ್ಗೆ ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಹೊನ್ನೆಬೈಲ್ ಗ್ರಾಮದ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಊರ ಗೌಡರಾದ ರಾಘವೇಂದ್ರ ಮಾಣಿ ಗೌಡ, ಊರಿನ ಬುದವಂತರಾದ ತಿಮ್ಮ ಮಾಣಿ ಗೌಡ,ಗ್ರಾ ಪಂ ಅಧ್ಯಕ್ಷ ವೆಂಕಟ್ರಮಣ ಕೆ ನಾಯ್ಕ, ನಿಕಟ ಪೂರ್ವ ಅಧ್ಯಕ್ಷ ಮಾದೇವ ಸುಬ್ಬು ಗುನಗ, ನಿವೃತ ಶಿಕ್ಷಕರಾದ ಬೊಮ್ಮ ಹಮ್ಮು ಗಾಂವಕರ, ಗುತ್ತಿಗೆದಾರ ಬೊಮ್ಮ ಮಾಣಿ ಗುನಗಾ ಮತ್ತಿತರರು ಹಾಗೂ ಸ್ಥಳೀಯ ಗ್ರಾಮಸ್ಥರನೇಕರು ಮೋಹಿನಿ ಗೌಡ (Anganwadi Worker) ಆಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ