Important
Trending

ಠಾಣೆಯ ಎದುರಿನ ಮೈದಾನದಲ್ಲಿಯೇ ಗಾಂಜಾ ಪೆಡ್ಲರ್ ನ ವಶಕ್ಕೆ ಪಡೆದ ಪೊಲೀಸರು: ವೈದ್ಯಕೀಯ ಪರೀಕ್ಷೆಯಲ್ಲಿಯೂ ದೃಢಪಟ್ಟ ಅಂಶ

ಅಂಕೋಲಾ : ಗಾಂಜಾ ಸೇವಿಸಿದ್ದರೆನ್ನಲಾದ ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದ ಪೋಲೀಸರು, ವೈದ್ಯಕೀಯ ಪರೀಕ್ಷೆಯಲ್ಲಿಯೂ ಅದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿತನ ವಿರುದ್ಧ ಕಾನೂನು ಕ್ರಮ ಮುಂದುವರೆಸಿದ್ದಾರೆ. ವಸತಿ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದ,ಕಾರವಾರ ಬೈತಖೋಲ ನಿವಾಸಿ ಗಿರೀಶ ಚಂದ್ರ ಭಂಡಾರಿ(19 ), ಬಂಧಿತ ಆರೋಪಿ.

SBI Recruitment 2023: ಉದ್ಯೋಗಾವಕಾಶ: 2 ಸಾವಿರ ಹುದ್ದೆಗಳು: 63 ಸಾವಿರದ ವರೆಗೆ ಮಾಸಿಕ ವೇತನ: Apply Now

ಈತನು ಪೊಲೀಸ ಠಾಣೆ ಎದುರಿನ ಮತ್ತು ಪೋಲೀಸ್ ವಸತಿ ಗೃಹ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಜೈಹಿಂದ್ ಹೈ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿದ ಹಾಗೆ ಸಂಶಯಾಸ್ಪದವಾಗಿ ಕಂಡು ಬಂದಾಗ, ಮತ್ತು ಅವನ ಬಾಯಿಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಈ ಕುರಿತು ವಿಚಾರಣೆ ಮಾಡಿದಾಗ, ಆರೋಪಿತ ತಾನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ..

ನಂತರ ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವರದಿಯಲ್ಲಿ ಆರೋಪಿತ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟ ಹಿನ್ನಲೆಯಲ್ಲಿ ಪೊಲೀಸರು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಂಕೋಲಾ ತಾಲೂಕಿನ ಪೊಲೀಸ್ ಅಧಿಕಾರಿಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದರೂ ,ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಗಾಂಜಾ ಘಮಲು ಎಲ್ಲೆಡೆಯೂ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಗಾಂಜಾ ಸೇವನೆ ಮಾಡುವ ಬೆರಳೆಣಿಕೆಯ ಆರೋಪಿತರು, ಮತ್ತು ಚಿಕ್ಕಪುಟ್ಟ ಮಾರಾಟಗಾರರನ್ನು ಹಿಡಿಯುವ ಪೊಲೀಸರು,ಇದರ ಹಿಂದೆ ಇರುವ ದೊಡ್ಡ ಜಾಲವನ್ನು ಬೇಧಿಸಬೇಕು, ಮತ್ತು ಮಾದಕ ವ್ಯಸನದಿಂದ ಪಟ್ಟಣ ಹಾಗೂ ಗ್ರಾಮಂತರ ಭಾಗದ ಕೆಲ ಸ್ಮಶಾನ ಮತ್ತಿತರ ನಿರ್ಜನ ಪ್ರದೇಶಗಳು, ರೈಲ್ವೆ ಗೇಟ್ ಅಕ್ಕ -ಪಕ್ಕದ ಸ್ಥಳಗಳು, ಹಳ್ಳ – ಕೊಳ್ಳಗಳ ಅಂಚಿನ ಪ್ರದೇಶ, ಪಶು ವೈದ್ಯಕೀಯ ಆಸ್ಪತ್ರೆ ಹಿಂಬಂದಿ ಓಣಿ, ಮತ್ತಿತರ ಪ್ರದೇಶಗಳಲ್ಲಿ ಗಾಂಜಾ ಘಾಟು ವಾಸನೆ ಜೋರಾಗಿ ಬಡಿಯುತ್ತಿದೆ ಎನ್ನಲಾಗಿದ್ದು ಪೊಲೀಸ್ ಇಲಾಖೆ ಈ ಕುರಿತು ಹದ್ದಿನ ಕಣ್ಣಿಟ್ಟು ಅಕ್ರಮ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ಇತ್ತೀಚೆಗೆ ಚಲನಚಿತ್ರ ಮಂದಿರದಲ್ಲಿಯೂ ಗಾಂಜಾ ಅಮಲಿನಲ್ಲಿದ್ದ ಕೆಲ ಯುವಕರ ವರ್ತನೆ ಕುರಿತು ತಾಲೂಕಾ ಮೂಲದ ಮಹಿಳಾ ಅಧಿಕಾರಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ಧ್ವನಿಎತ್ತಿ ತಮ್ಮ ಅಸಮಾಧಾನ ಹೊರಹಾಕಿದ್ದನು ಸ್ಮರಿಸಬಹುದಾಗಿದೆ.,ಸಂಬಂಧಿತ ಇಲಾಖೆ ಮಾದಕ ಜಾಲದ ವಿರುದ್ಧ ತನ್ನ ಕಾರ್ಯ ದಕ್ಷತೆ ತೋರಿಸಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button