ಅಂಕೋಲಾ: ಕಳ್ಳರು ನಾನಾ ರೀತಿಯಲ್ಲಿ ತಮ್ಮ ಕೈ ಚಳಕ ತೋರಿಸುತ್ತಲೇ ಬಂದಿದ್ದು , ಕಾರವಾರದಲ್ಲಿ ಬೋಟುಗಳ ಇಂಜಿನ್ ಗಳನ್ನೇ ಕಳ್ಳತನ ಮಾಡಿದ್ದ ಆರೋಪಿಯನ್ನು , ಬಂಧಿಸುವ ಮೂಲಕ ಕಾರವಾರ ಪೊಲೀಸರು, ಆರೋಪಿತನಿಂದ ಕಳುವು ಮಾಡಲಾಗಿದ್ದ ಇಂಜಿನುಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ವಾಹನವೊಂದನ್ನು ವಶಪಡಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ..
ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ,ಬೈತಕೋಲ ಮತ್ತು ಅಶ್ವೇವಾಡ ಕಡಲ ತೀರಗಳಲ್ಲಿ ನಿಲ್ಲಿಸಿಟ್ಟ ಬೋಟುಗಳ ಇಂಜಿನ್ ಕಳ್ಳತನ ಆಗಿರುವ ಕುರಿತು ಪ್ರತ್ಯೇಕ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದ ಪೊಲೀಸರ ವಿಶೇಷ ತಂಡ ಗೋವಾ ರಾಜ್ಯದ ಆರೋಪಿಯನ್ನು ಬಂಧಿಸಿ ಸುಮಾರು 4.68 ಲಕ್ಷ ಮೌಲ್ಯದ ನಾಲ್ಕು ಪೆಟ್ರೋಲ್ ಇಂಜಿನುಗಳು, ಮತ್ತು 20 ಸಾವಿರ ರೂಪಾಯಿ ಮೌಲ್ಯದ ಸ್ಕೂಟಿ ವಾಹನ ಜಪ್ತು ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣು ವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಡಿ.ವೈ.ಎಸ್.ಪಿ ವೆಲಂಟನ್ ಡಿಸೋಜ, ಶಹರ ಠಾಣೆ ಪೊಲೀಸ್ ನಿರೀಕ್ಷಕ ರಮೇಶ ಹೂಗಾರ ಮಾರ್ಗದರ್ಶನದಲ್ಲಿ ಪಿ.ಎಸ್. ಐ ಕುಮಾರ ಕಾಂಬಳೆ ನೇತೃತ್ವದ ಸಿಬ್ಬಂದಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಈ ಯಶಸ್ವೀ ಕಾರ್ಯಾಚರಣೆಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದ್ದು, ಸ್ಥಳೀಯ ಮೀನುಗಾರ ಸಮಾಜ ಮತ್ತು ಸಾರ್ವಜನಿಕ ಪ್ರಮುಖರನೇಕರು ಪೋಲೀಸ್ ಇಲಾಖೆಯ ಯಶಸ್ವೀ ಕಾರ್ಯಾಚರಣೆಗೆ ಅಭಿನಂದಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ