Important
Trending

ಮಾಜಿ ಶಾಸಕ ವಿ.ಎಸ್. ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ಅರೆಸ್ಟ್

ಸಿದ್ದಾಪುರ: ಎ.ಎಸ್.ಐ ಬಾಲಕೃಷ್ಣ ಪಾಲೇಕರ್ ಎಂಬವರಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಪ್ರಕರಣ ಹಾಗೂ ಎರಡು ಚೆಕ್ ಬೌನ್ಸ್ ಪ್ರಕರಣ ಸಂಬoಧಿಸಿದoತೆ ಮಾಜಿ ಶಾಸಕರ ಪುತ್ರ ಬಾಪು ಗೌಡ ಪಾಟೀಲ್ ರನ್ನ ಅರೆಸ್ಟ್ ಮಾಡಲಾಗಿದೆ. 2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜತೆ ಸೇರಿ ಬಾಪು ಗೌಡ ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದರು.

ಪೊಲೀಸರು ಬಾಪು ಗೌಡಗೆ ಸಂಬoಧಿಸಿದ ವಾಹನ ಹಿಡಿದಿದ್ದ ಹಿನ್ನೆಲೆ ಮುಂಡಗೋಡ ಐಬಿಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಬಾಪು ಗೌಡ ಪಾಟೀಲ್ ಹಾಗೂ ಆತನ 15 ಮಂದಿ ಸಹಚರರು ಎಎಸ್‌ಐ ಅವರನ್ನು ದೂಡಿ, ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯವಾಗಿ ನಿಂದಿಸಿದ್ದರು. ಎಎಸ್‌ಐ ಬಾಲಕೃಷ್ಣ ತನ್ನ ಕರೆ ಸ್ವೀಕರಿಸಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.

ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬoಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದ ಎನ್ನಲಾಗಿದೆ,
ಪ್ರಕರಣ ಸಂಬoಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಪ್ರತೀ ಪ್ರಕರಣದಲ್ಲೂ ಮೂರು ಮೂರು ಬಾರಿ ವಾರೆಂಟ್ ಹೊರಡಿಸಿದ್ದರು ಬಾಪು ಗೌಡ ಹಾಜರಾಗಿರಲಿಲ್ಲ. ಕಳೆದ 6 ತಿಂಗಳಿನಿoದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ.

ಈತನ ಜತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ 14 ಮಂದಿ ಗೆಳೆಯರು ಕೋರ್ಟ್ಗೆ ಹಾಜರಾದ್ರೂ ಬಾಪು ಗೌಡ ಮಾತ್ರ ಹಾಜರಾಗಿರಲಿಲ್ಲ ಬೆಂಗಳೂರಿನಲ್ಲಿ ಇದ್ದರೂ ವಾರೆಂಟ್ ನೋಟೀಸ್ ಅನ್ನು ಕೂಡಾ ನಿರ್ಲಕ್ಷಿಸಿದ್ದ ಶನಿವಾರ ರಾತ್ರಿ 10ಗಂಟೆಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿ ಬಾಪು ಗೌಡ ಪಾಟೀಲ್‌ಗೆ ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಬಂಧನ ವಿಧಿಸಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button