ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು: ಏನಾಯ್ತು ನೋಡಿ?
ಅಂಕೋಲಾ: ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು, ಬೇರೊಂದು ಕಡೆ ರಸ್ತೆ ಸರಿ ಇರುವಲ್ಲಿ ಮರು ಡಾಂಬರಿಕರಣ ಮಾಡುತ್ತಿರುವ ವ್ಯವಸ್ಥೆಯನ್ನು ವಿರೋಧಿಸಿದ ಗ್ರಾಮಸ್ಥರು ಪ್ರತಿಭಟಿಸುವ ಮೂಲಕ ಕೆಟ್ಟು ಹೋದ ರಸ್ತೆಯನ್ನು ಡಾಂಬರಿಕರಣ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಕೋಲಾ ಪಟ್ಟಣದ ಕನಸೆಗದ್ದೆಯಿಂದ ಬಂದರ್ ವರೆಗೆ ನಗರೋತ್ಥಾನ ಯೋಜನೆಯಲ್ಲಿ ಪುರಸಭೆ ವತಿಯಿಂದ ನಡೆಸಲಾಗುತ್ತಿರುವ ರಸ್ತೆ ಮರು ಡಾಂಬರಿಕರಣ ಪೀರು ಶೆಟ್ಟಿ ಕಟ್ಟೆಯವರೆಗೆ ಮಾಡಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು ಆದರೆ ಆ ಭಾಗದಲ್ಲಿ ರಸ್ತೆ ಸರಿ ಇರುವ ಕಾರಣ ಅದರ ಬದಲಿಗೆ ಹೊಂಡ ಬಿದ್ದು ಓಡಾಡಲು ಕಷ್ಟಕರ ಆಗಿರುವ ಬೇಳಾ ಬಂದರ ಶಾಲೆ ಎದುರಿನ ಮುಖ್ಯ ರಸ್ತೆ ಸರಿ ಪಡಿಸುವಂತೆ ಸಮಾಜಿಕ ಕಾರ್ಯಕರ್ತ ವಕೀಲ ಉಮೇಶ ನಾಯ್ಕ ಅವರ ನೇತೃತ್ವದಲ್ಲಿ ಆ ಭಾಗದ ಕೆಲ ಪ್ರಮುಖರು ಆಗ್ರಹಿಸಿದ್ದರು.
ಕಾಮಗಾರಿ ಗುತ್ತಿಗೆದಾರನ ಕಡೆಯವರಿಗೆ ತಿಳಿಸಿದರೆ ಸಂಬಧಿತ ಇಂಜಿನಿಯರ್ ಹೇಳದೇ ಆ ಭಾಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದರಿಂದ , ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ ಎನ್ನುವ ಕಾರಣದಿಂದ ಗ್ರಾಮದ ಕೆಲವರು, ರಸ್ತೆ ಹದಗೆಟ್ಟ ಕಡೆ ಕಾಮಗಾರಿ ನಡೆಸದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಜನರ ಹೋರಾಟಕ್ಕೆ ಮಣಿದ ಗುತ್ತಿಗೆದಾರರು ಕೊನೆಗೂ ರಸ್ತೆ ಕೆಟ್ಟು ಹೋದ ಬಂದರ್ ಪ್ರದೇಶದಲ್ಲಿ 200 ಮೀಟರ್ ಡಾಂಬರಿಕರಣ ಮಾಡಿ ರಸ್ತೆ ದುರುಸ್ಥಿ ಕಾರ್ಯ ನಡೆಸಿದರೆಂದು ವಕೀಲ ಉಮೇಶ ನಾಯ್ಕ ಹೇಳಿದರು. ವಕೀಲ ಉಮೇಶ ನಾಯ್ಕ ಅವರ ಜೊತೆಯಲ್ಲಿ ಬೇಳಾ ಬಂದರಿನ ಪ್ರಮುಖರುಗಳಾದ ಅನೀಲ ರಾಮಾ ನಾಯ್ಕ, ಉದಯ ನಾಯ್ಕ, ರಾಜೇಶ ನಾಯ್ಕ, ರವಿ ನಾಯ್ಕ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕೊನೆಗೂ ಹದ ಗೆಟ್ಟ ರಸ್ತೆ ರಿಪೇರಿ ಮಾಡಿ ಡಾಂಬರಿಕರಣ ಕಾಮಗಾರಿ ನಡೆಸಿ,ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟ ಗುತ್ತಿಗೆದಾರರು ಮತ್ತು ಕೆಲಸಗಾರರಿಗೆ ವಕೀಲ ಉಮೇಶ ನಾಯ್ಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ