
3 ಜನರಿಗೆ ಹೋಂ ಐಸೋಲೇಶನ್
ಸೋಂಕಿತರ ಸಂಪರ್ಕಿತರಲ್ಲಿ ಕಾಣಿಸಿಕೊಂಡ ನಂಜು
ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ ಒಟ್ಟೂ 12 ಕೋವಿಡ್ ಕೇಸ್ಗಳು ದಾಖಲಾಗಿವೆ. ಶೆಡಗೇರಿ 9, ಹುಲಿದೇವರವಾಡ, ಶೇಡಿಕುಳಿ ಮತ್ತು ಬೇಲೇಕೇರಿ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ಕಾಣಿಸಿಕೊಂಡಿದ್ದು, ಇವರೆಲ್ಲರಿಗೂ ಆಯಾ ವ್ಯಾಪ್ತಿಯ ಈ ಹಿಂದಿನ ಸೋಂಕಿತರ ಸಂಪರ್ಕದಿಂದ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಇಂದು ಒಟ್ಟೂ 91 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. 3 ಜನರನ್ನು ಹೋಂ ಐಸೋಲೇಶನ್ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ತಾಲೂಕು ಮೂಲದ ವ್ಯಕ್ತಿಯೋರ್ವರಲ್ಲಿ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಕುರಿತು ರಾತ್ರಿ ವೇಳೆಗೆ ಅಥವಾ ನಾಳೆ ಮುಂಜಾನೆ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಅಧಿಕೃತ ವರದಿ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ
- ವಿವೇಕನಗರ ವಿಕಾಸ ಸಂಘದಿಂದ ‘ಮಾಸದ ಕಾರ್ಯಕ್ರಮ
- ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪುಷ್ಪಲತಾ ನಾಯಕ, ಕಾರ್ಯದಶಿಯಾಗಿಸದಾನಂದ ಆಯ್ಕೆ