Follow Us On

WhatsApp Group
Important
Trending

ಮೀನು ಮಾರುಕಟ್ಟೆಗೆ ಬಂದ ಯುವಕ ನಾಪತ್ತೆ: ದೂರಿನಲ್ಲಿ ಏನಿದೆ?

ಕುಮಟಾ: ತನ್ನ ತಂದೆ ತಾಯಿ ಜೊತೆಯಲ್ಲಿ ಮೀನು ಮಾರುಕಟ್ಟೆಗೆ ಬಂದ ಯುವಕ ನಾಪತ್ತೆಯಾದ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾ ತಾಲೂಕಿನ ದೀವಳ್ಳಿಯ ನಿವಾಸಿಯಾದ ರೋಲ್ಸನ್ ಎಂಬಾತ ಸಪ್ಟೆಂಬರ್ 28 ರಂದು ಬೆಳಿಗ್ಗೆ ತನ್ನ ತಂದೆ ತಾಯಿ ಜೊತೆಯಲ್ಲಿ ಕಿರಾಣಿ ಸಾಮಾನುಗಳನ್ನು ಖರೀದಿ ಮಾಡಲು ಮಾರುಕಟ್ಟೆಗೆ ಬಂದಿದ್ದ. ಕುಮಟಾ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುತ್ತಿದ್ದ ವೇಳೆ, ಮೀನು ಮಾರುಕಟ್ಟೆಯ ರಸ್ತೆಯಿಂದ ಅಳ್ವೆಕೋಡಿ ಕಡೆಗೆ ನಡೆದುಕೊಂಡು ಹೋದವನು ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಮರಳಿ ಮನೆಗೂ ಬಾರದೇ ಸಂಬoಧಿಕರ ಮನೆಗೂ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಈತನನ್ನು ಹುಡುಕಿ ಕೊಡುವಂತೆ ಕುಮಟಾ ಪೊಲಿಸ್ ಠಾಣೆಯಲ್ಲಿ ಯುವಕನ ಪಾಲಕರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈತನ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ, ಕುಮಟಾ

Back to top button