Join Our

WhatsApp Group
Big News
Trending

ಲಾರಿಗೆ ಹಿಂಬದಿಯಿoದ ಡಿಕ್ಕಿ: ಬೈಕ್ ಸವಾರ ಸಾವು

ಭಟ್ಕಳ: ತಾಲೂಕಿನ ಬೈಲೂರು ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ 5.45ಕ್ಕೆ ಕಂಟೇನರ್ ಲಾರಿ ಚಾಲಕನ ನಿರ್ಲಕ್ಷತನಕ್ಕೆ ಹೊನ್ನಾವರದ ಕಡೆಯಿಂದ ಭಟ್ಕಳದ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನೊರ್ವ ಅಪಘಾತಕೊಳಗಾಗಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದು, ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಪ್ರಸ್ತುತ ಮಂಗಳೂರಿನ ಏರ್‌ಪೋರ್ಟ ರಸ್ತೆಯಲ್ಲಿ ವಾಸಿಸುತ್ತಿರುವ ಮೂಲತಃ ಬಾಗಲಕೋಟೆಯ ಇಳಕಲ್‌ನ ವಜ್ಜಲ್ ಗ್ರಾಮದ ಮಲ್ಲಪ್ಪ ರಮೇಶ್ ಚಲವಾದಿ(24)ಮೃತ ಬೈಕ್‌ ಚಾಲಕ.

ಉತ್ತರ ಪ್ರದೇಶದ ವಾರಣಾಸಿಯ ಪಿಂಡ್ರಾ ತಾಲೂಕಿನ ಸುನೀಲ ಕುಮಾರ ಎಂಬ ಕಂಟೇನರ ಲಾರಿ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದ. ರಾಷ್ಟ್ರೀಯ ಹೆದ್ದಾರಿ-66 ಹೊನ್ನಾವರ ಭಟ್ಕಳ ರಸ್ತೆಯ ಹವ್ಯಕ ಸಭಾ, ಭವನದ ಎದುರಿಗೆ ಹಿಂಬದಿ ಬರುವ ವಾಹನಕ್ಕೆ ಯಾವುದೇ ಸೂಚನೆ ನೀಡದೇ ಕಂಟೇನರ್ ಲಾರಿ ನಿಧಾನ ಮಾಡಿದ್ದರಿಂದ ಅದೇ ಮಾರ್ಗದಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಬೈಕ್ ಸವಾರ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಭಾರಿ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ , ಭಟ್ಕಳ

Back to top button