Focus News
Trending

ಉತ್ತರ ಕನ್ನಡದ ಇಂದಿನ ಕರೊನಾ ವಿವರ ಇಲ್ಲಿದೆ

ಕುಮಟಾದಲ್ಲಿ ಐದು ಪಾಸಿಟಿವ್
ಶಿರಸಿಯಲ್ಲಿಂದು 6 ಕೇಸ್
ಅಂಕೋಲಾದಲ್ಲಿ 1 ಕೋವಿಡ್ ಪ್ರಕರಣ
ಹೊನ್ನಾವರದಲ್ಲಿ 8 ಸೋಂಕಿತರು ಪತ್ತೆ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು ಎಂಟು ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪಟ್ಟಣದಲ್ಲಿ-3 ಹಾಗೂ ಗ್ರಾಮೀಣ ಭಾಗದಲ್ಲಿ-5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊನ್ನಾವರ ಪಟ್ಟಣದ ಜೋಗಮಟ್ಟದ 72 ವರ್ಷದ ಪುರುಷ, 42 ವರ್ಷದ ಪುರುಷ, 64 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಗ್ರಾಮೀಣ ಭಾಗವಾದ ಸಾಲಕೋಡಿನ 48 ವರ್ಷದ ಪುರುಷ, 14 ವರ್ಷದ ಬಾಲಕಿ, ಹೊಸಾಕುಳಿಯ 42 ವರ್ಷದ ಪುರುಷ, ಮುಗ್ವಾದ 41 ವರ್ಷದ ಮಹಿಳೆ, ಗುಡ್ಡೆಬಾಳದ 42 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಮನೆಯಲ್ಲಿ 40 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿ ಐದು ಪಾಸಿಟಿವ್:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹೆರವಟ್ಟಾ, ಯಾಣ, ಹುಬ್ಬಣಗೇರಿ ಮುಂತಾದ ಭಾಗದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೆರವಟ್ಟಾದ 62 ವರ್ಷದ ಪುರುಷ, 29 ವರ್ಷದ ಯುವಕ, ಹುಬ್ಬಣಗೇರಿಯ 35 ವರ್ಷದ ಪುರುಷ, ಯಾಣದ 45 ವರ್ಷದ ಪುರುಷ ಮತ್ತು ಕುಮಟಾದ 62 ವರ್ಷದ ಮಹಿಳೆಯಲ್ಲಿ ಸೋಂಕು ದೃಪಟ್ಟಿದೆ. ಇಂದು 5 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1765 ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿoದು 1 ಕೊವಿಡ್ ಕೇಸ್

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ 1 ಹೊಸ ಕೊವಿಡ್ ಕೇಸ್ ಪತ್ತೆಯಾಗಿವೆ. ಬಳಲೆ ವ್ಯಾಪ್ತಿಯ 20ರ ಯುವತಿಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ. ಗುಣಮುಖರಾದ 4 ಜನರನ್ನು ಬಿಡುಗಡೆಗೊಳಿ ಸಲಾಗಿದ್ದು, ಹೋಂ ಐಸೋಲೇಶನ್‌ನಲ್ಲಿರುವ 21 ಮಂದಿ ಸಹಿತ ಒಟ್ಟೂ 24 ಪ್ರಕರಣಗಳು ಸಕ್ರಿಯ ವಾಗಿದೆ. ತಾಲೂಕಿನ ವಿವಿಧೆಡೆಯಿಂದ 7 ರ‍್ಯಾಟ್ ಮತ್ತು 169 ಆರ್‌ಟಿಪಿಸಿಆರ್ ಸೇರಿ ಒಟ್ಟೂ 176 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಿರಸಿಯಲ್ಲಿಂದು 6 ಕೇಸ್:

ಶಿರಸಿ: ತಾಲೂಕಿನಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ನಗರದ ದೇವಿಕೆರೆಯಲ್ಲಿ 1, ಕರಿಗುಂಡಿ ರೋಡಿನಲ್ಲಿ 1, ನೆಹರು ನಗರದಲ್ಲಿ 1, ಬನವಾಸಿ ಗುಡ್ನಾಪುರದಲ್ಲಿ 1, ಕಡವೆಯಲ್ಲಿ 2 ಕೇಸ್ ದೃಢವಾಗಿದೆ.29 ಜನರು ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ ಮತ್ತು ಯೋಗೇಶ ಮಡಿವಾಳ ಕುಮಟಾ , ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button