ಮಾಹಿತಿ
Trending

ಹೈಟೆಕ್ ಗೋಕಳ್ಳತನ ಹೇಗೆ ಮಾಡ್ತಾರೆ ನೋಡಿ

ಕಾರಿನಲ್ಲಿ ಬಂದು ಜಾನುವಾರು ಕಳುವು
ಬೆಚ್ಚಿ ಬೀಳಿಸುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಶಿರಸಿ: ಇತ್ತಿಚಿನ ದಿನದಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಲೇ ಇದೆ. ಕಾರಿನಲ್ಲಿ ರಾತ್ರಿ ವೇಳೆ ಗೋವುಗಳನ್ನು ತುಂಬಿಕೊಂಡು ಹೋಗಿರುವ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲೂ ಇದೀಗ ಹೈಟೆಕ್ ಗೋಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಹಲವು ದಿನಗಳಿಂದ ಶಿರಸಿ ನಗರದ ಪ್ರತ್ಯೇಕ ಸ್ಥಳಗಳಲ್ಲಿ ರಾತ್ರಿ ಹೊತ್ತು ಸ್ಕಾರ್ಪಿಯೋ, ಇನೋವಾ ಮುಂತಾದ ವಾಹನ ಬಳಸಿ, ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ.

ಶಿವಾಜಿ ವೃತ್ತದಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ದುಷ್ಕರ್ಮಿಗಳು ಗೋವುಗಳನ್ನು ಯಾರು ಇಲ್ಲದ ಸಮಯ ನೋಡಿ, ಕಾರಿನಲ್ಲಿ ಬಂದು ಜಾನುವಾರುಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಈ ಸಿಸಿಟಿವಿಯಲ್ಲಿದೆ.

ಉತ್ತರಕನ್ನಡದಲ್ಲಿ ದಿನೇ ದಿನೇ ಗೋವುಗಳ ಕಳ್ಳತನ ಹೆಚ್ಚುತ್ತಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕೆಂದು ಗೋಪ್ರೇಮಿಗಳು ಆಗ್ರಹಿಸಿದ್ದಾರೆ.

ಈ ಕುರಿತ ಬೆಚ್ಚಿಬೀಳಿಸುವ ವಿಡಿಯೋ ಇಲ್ಲಿದೆ ನೋಡಿ.

ವಿಸ್ಮಯ ನ್ಯೂಸ್, ಶಿರಸಿ

Back to top button