ಕುಮಟಾ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ಇಂದ ಎಪಿಎಂಸಿ ಒಳಗಡೆ ವ್ಯವಹರಿಸುವ ವರ್ತಕರಿಗೆ ಮಾತ್ರ ಮಾರುಕಟ್ಟೆ ಶುಲ್ಕ ತಗಲುವಂತಿದೆ , ಮಾರುಕಟ್ಟೆ ಪ್ರಾಂಗಣ ಹೊರಗಡೆ ವ್ಯವಹರಿಸುವ ವರ್ತಕರಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯತಿ ಇರುತ್ತದೆ ಇದರಿಂದಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹರಿಸುವ ವರ್ತಕರಿಗೆ ಎಪಿಎಂಸಿ ಪ್ರಾಂಗಣದ ಹೊರಗೆ ವ್ಯವಹರಿಸುವ ವರ್ತಕರೊಂದಿಗೆ ಸ್ಪರ್ಧಿಸಲು ಸಾಧ್ಯವಾಗದೆ ಕ್ರಮೇಣ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹಾರ ಸ್ಥಗಿತಗೊಳ್ಳುವ ಕಾರಣದಿಂದ ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರು ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಮಾರುಕಟ್ಟೆ ಶುಲ್ಕವನ್ನು ಕಡಿಮೆ ಮಾಡಿಸಿ ವ್ಯವಹಾರ ಪ್ರಾರಂಭಿಸಿದರು,
ಆದರೆ ಇದೀಗ ಪುನಹ ಸರಕಾರ ಮಾರುಕಟ್ಟೆ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿರುವುದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯವಹರಿಸಲು ವರ್ತಕರಿಗೆ ಅಸಾಧ್ಯವಾಗಿದ್ದು ಕಾರಣ ಅರೇಕಾ ಚಂಬರ್ ಶಿವಮೊಗ್ಗ ಇವರ ನಿರ್ದೇಶನದಂತೆ ದಿನಾಂಕ 21/ 12 /2020 ರಿಂದ ಕುಮಟಾ ಮಾರುಕಟ್ಟೆ ಪ್ರಾಂಗಣದಲ್ಲಿ ಅನಿರ್ಧಿಷ್ಠಾವಧಿ ವ್ಯಾಪಾರ ಬಂದ್ ಮಾಡಲು ವರ್ತಕರ ಸಂಘ, ದಲಾಲರ ಸಂಘ, ಹಾಗೂ ಹಮಾಲರ ಸಂಘ ಗಳು ಸಂಯುಕ್ತವಾಗಿ ನಿರ್ಧರಿಸಿರುತ್ತವೆ, ಕುಮಟಾ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಸಿ ಅಡಿಕೆ ಮಾರುಕಟ್ಟೆಗೆ ಬರುತ್ತಿದ್ದು ರೈತರು ಸದ್ಯ ತಮ್ಮ ಹಸಿ ಅಡಿಕೆಯನ್ನು ಸುಲಿಯದೆ ಮುಂದಿನ ದಿನಗಳಲ್ಲಿ ವ್ಯಾಪಾರ ಪ್ರಾರಂಭವಾದಾಗ ಅಡಿಕೆ ಸುಲಿದು ತರಬೇಕೆಂದು ಕುಮಟಾ ಎಪಿಎಮ್‌ಸಿಯ ವರ್ತಕ ಪ್ರತಿನಿಧಿಗಳಾದ ಅರವಿಂದ್ ಪೈ ಕೋರಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ